ವಿಟ್ಲ:ವಿಠಲ ವಿದ್ಯಾ ಸಂಘದ ವಿಠಲ ಪ್ರೌಢ ಶಾಲಾ ಸಾಹಿತ್ಯ ಸಂಘ ಹಾಗೂ ವಿಟ್ಲದ ಯಕ್ಷಸಿಂಧೂರ ಪ್ರತಿಷ್ಠಾನದ ವತಿಯಿಂದ ಪ್ರತಿ ಶನಿವಾರ ವಿಠಲ ಪ್ರೌಢ ಶಾಲೆಯಲ್ಲಿ ನಡೆಯವ ಯಕ್ಷಗಾನ ತರಬೇತಿಯ ಉದ್ಘಾಟನೆಯನ್ನು ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್ ನೆರವೇರಿಸಿದರು.
ಹಿರಿಯ ಶಿಕ್ಷಕ ಎ ಮಹಬಲೇಶ್ವರ ಭಟ್ ಅಧ್ಯಕ್ಷತೆ ವಹಿಸಿ ಮಾತಾಡಿ `ಎಳೆಯ ಪ್ರಾಯದಲ್ಲಿ ಈ ಕಲೆಯ ಬಗ್ಗೆ ಆಸಕ್ತಿ ವಹಿಸಿದರವರು ನಾಟ್ಯಕಲೆಯನ್ನು ಸಿದ್ಧಿಸಿಕೊಂಡು ಜೀವನದುದ್ದಕ್ಕೂ ಕಲಾ ಪ್ರೇಮವನ್ನು ಉಳಿಸಿ ಬೆಳೆಸಬೇಕು’ ಎಂದರು.
ಪ್ರಷ್ಞಾಶಂಕರಿ, ಅನೀಸತ್ ಆಸಿಯಾ ಮತ್ತು ಪ್ರತಿಕ್ಷಾ ಪ್ರಾರ್ಥಿಸಿದರು. ಶಿಕ್ಷಕ ಕಲಾವಿದ ಚಣಿಲ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ ಪ್ರಸ್ತಾವಿಸಿದರು. ಅಧ್ಯಾಪಕ ರಮೇಶ್ ಬಿ ಕೆ ವಂದಿಸಿದರು. ಇಂಗ್ಲೀಷ್ ಉಪನ್ಯಾಸಕ ಪ್ರಶಾಂತ್ ನಿರೂಪಿಸಿದರು.
