ದ ಕ ಜಿ ಪಂ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾಗಿರಿ, ಪಡಿಬಾಗಿಲು ಇಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಬೆಂಗಳೂರಿನ ದಿ| ಸಾವಿತ್ರಮ್ಮ ಮತ್ತು ದಿ| ದೇವಪ್ಪ ಕಾಮತ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತವಾಗಿ ಬರೆಯುವ ಪುಸ್ತಕಗಳನ್ನು ವಿತರಿಸಲಾಯಿತು.
ಕಾಮತ್ ಬಿಲ್ಡರ್ಸ್ & ಡೆವಲಪರ್ಸ್ ಬೆಂಗಳೂರು ಇದರ ಮಾಲಕ ಕಿರಣ್ ಕಾಮತ್, ಇಂಜಿನೀಯರ್ ವೇದವ್ಯಾಸ ಕೆ ಮತ್ತು ಕೇಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಚಂದ್ರ ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಕಾರಂತ್ ಅಧ್ಯಕ್ಷತೆವಹಿಸಿದ್ದರು.

p
ಮುಖ್ಯೋಪಾಧ್ಯಾಯಿನಿ ಶಶಿಕಲಾ ಪ್ರಸ್ತಾವಿಸಿ ಸ್ವಾಗತಿಸಿದರು. ಸಹಶಿಕ್ಷಕಿ ಮಲ್ಲಿಕಾ ವಂದಿಸಿದರು. ಶಿಕ್ಷಕಿ ಪುಷ್ಪಾವತಿ ನಿರೂಪಿಸಿದರು. ಎಸ್ ಡಿ ಎಂ ಸಿ ಸದಸ್ಯರು, ಸಹಶಿಕ್ಷಕರು, ಮಕ್ಕಳು ಮತ್ತು ಪೋಷಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *