f46530a83d600068b8e911ce58dbe4be

ಮಂಗಳೂರು: ನಗರದಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಎಡೆಬಿಡದೆ ಸುರಿದ ತೀವ್ರ ಮಳೆಯಿಂದ ಅಕಾಲಿಕ ಸಾವನ್ನಪ್ಪಿದ ಇಬ್ಬರು ಮೃತರ ಕುಟುಂಬಗಳಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ತಲಾ 5 ಲಕ್ಷ ರೂ. ಪರಿಹಾರವನ್ನು ಬುಧವಾರ ಬೆಳಗ್ಗೆ ವಿತರಿಸಿದರು.

ಧರೆ ಕುಸಿದು ಸಾವನ್ನಪ್ಪಿದ ಕೆಪಿಟಿ ಉದಯನಗರದ ನಿವಾಸಿ ಮೋಹಿನಿ (60) ಹಾಗು ಕೊಡಿಯಲ್ ಬೈಲ್ ಪಿವಿಎಸ್ ಕಲಾಕುಂಜ ಸಮೀಪದ ಮಹಿಳೆ ಮುತ್ತಾಬಾಯಿ (80) ಅವರ ಕುಟುಂಬಗಳಿಗೆ ಜಿಲ್ಲಾಧಿಕಾರಿ ಪರಿಹಾರ ವಿತರಿಸಿ, ಸಾಂತ್ವನ ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *