1910b284-695c-4b64-a661-35de802365e8

ಮಂಗಳೂರು:  ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕರಾವಳಿಗೆ ಮೂರು ದಿನಗಳ ಹಿಂದೆಯೇ ಮುಂಗಾರು ಪ್ರವೇಶಿಸಿದ್ದು, ಪರಿಣಾಮ ಭಾರೀ ಗಾಳಿ ಮಳೆಯಾಗುತ್ತಿದೆ. ಇನ್ನು ನಗರದ ಬಹುತೇಕ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆ ಅಲ್ಲೊಲ ಕಲ್ಲೊಲವನ್ನೆ ಸೃಷ್ಠಿಸಿದೆ.

ಕೃತಕ ನೆರೆಯಿಂದಾಗಿ ಕೆಲವೊಂದು ತಗ್ಗು ಪ್ರದೇಶಗಳಲ್ಲಿ ಇರುವಂತಹ ಮನೆಗಳಿಗೆ ನೀರು ನುಗ್ಗಿದೆ. ಚರಂಡಿಗಳಲ್ಲಿ ಹೂಳು ತುಂಬಿರುವ ಕಾರಣದಿಂದಾಗಿ ಮಳೆನೀರು ರಸ್ತೆಯಲ್ಲೇ ಹರಿಯುತ್ತಿದ್ದು, ವಾಹನ ಸವಾರರು ಮತ್ತು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಇನ್ನು ಮಳೆಯಿಂದ ನಗರದ ಪಡೀಲ್ ಅಂಡರ್ ಬ್ರಿಡ್ಜ್, ಕೂಳೂರು, ಕುತ್ತಾರು ಮುಖ್ಯರಸ್ತೆ, ಹಂಪನಕಟ್ಟೆ ಸೆಂಟ್ರಲ್ ರೈಲ್ವೆ ನಿಲ್ದಾಣ , ಯೆಯ್ಯಾಡಿ, ಶರ್ಬತ್ ಕಟ್ಟೆ, ಬಿಜೈ , ತೊಕ್ಕೊಟ್ಟು ಮುಂತಾದೆಡೆ ಕೃತಕ ಪ್ರವಾಹ ಸೃಷ್ಟಿಯಾಗಿದೆ. ಬಿಜೈ ಮತ್ತು ಹಂಪನಕಟ್ಟೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ವಾಹನಗಳು ಕೃತಕ ನೆರೆಯಾಗಿದ್ದು, ಸಂಚಾರ ದಟ್ಟಣೆಯು ಹೆಚ್ಚಾಗಿದೆ.

ನಗರಪಾಲಿಕೆಯು ಚರಂಡಿ ಹೂಳು ತೆಗೆಯದೇ ಇರುವುದೇ ಕೃತಕ ನೆರೆಗೆ ಕಾರಣವೆಂದು ಸಾರ್ವಜನಿಕರು ಆರೋಪಿಸಿದ್ದಾರೆ.

1d3a9796-b311-4686-a1c7-d0f1a50dede9

4b9d869f-674e-436e-b618-0930c0f3a898

90fdb152-44e8-4019-89d7-66305de26d6b

16d6ea6a-3b46-4945-9d50-a7e405b420ab

0a5db27d-03ff-4d05-b322-c3edbbc3a5ab

 

 

By suddi9

Leave a Reply

Your email address will not be published. Required fields are marked *