ಬ್ರಹ್ಮಾವರ: ತುಂಟಾಟದೊಂದಿಗೆ ಎಲ್ಲೆಂದರಲ್ಲಿ ಓಡಾಡಿಕೊಂಡಿರಬೇಕಿದ್ದ ಪುಟಾಣಿ ಬಾಲಕಿ ಆಸ್ಪತ್ರೆಯಲ್ಲಿ ಮಲಗಿದ್ದಾಳೆ. ಪೇತ್ರಿ ಬಾಯರ್ಬೆಟ್ಟಿನ ಜಯ ನಾಯ್ಕ ಮತ್ತು ಶಕುಂತಳಾ ದಂಪತಿಯ ಪುತ್ರಿ ಲಾವಣ್ಯ (4 ವರ್ಷ) ಕ್ಯಾನ್ಸರ್ನಿಂದ ಬಳಲುತ್ತಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಒಂದು ತಿಂಗಳ ಹಿಂದೆ ವಿಚಾರ ತಿಳಿದು ಬಂದಿದ್ದು, ಚಿಕಿತ್ಸೆ ಪ್ರಾರಂಭಿಸಲಾಗಿದೆ. ತುರ್ತು ಚಿಕಿತ್ಸೆಗೆ ಸುಮಾರು 2 ಲಕ್ಷ ರೂ. ಹಾಗೂ ಒಂದು ವರ್ಷದ ತನಕ ನಿರಂತರ ಪರೀಕ್ಷೆಗಳು ಸೇರಿ ಒಟ್ಟು 6 ಲಕ್ಷ ರೂ. ಖರ್ಚು ಅಂದಾಜಿಸಲಾಗಿದೆ.
ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿರುವ ದಂಪತಿ ಸಹೃದಯಿ ಓದುಗರ ನೆರವನ್ನು ಯಾಚಿಸಿದ್ದಾರೆ. ಧನ ಸಹಾಯ ಮಾಡುವವರು ಸಿಂಡಿಕೇಟ್ ಬ್ಯಾಂಕ್ ಪೇತ್ರಿ ಶಾಖೆಯಲ್ಲಿರುವ ಜಯ ನಾಯ್ಕ ಅವರ ಖಾತೆ ಸಂಖ್ಯೆ 01812030004941(ಐಎಫ್ಎಸ್ಸಿ ನಂ.: ಎಸ್ವೈಎನ್ಬಿ0000181)ಗೆ ಜಮೆ ಮಾಡುವಂತೆ ವಿನಂತಿಸಲಾಗಿದೆ.

