ಸುದ್ದಿ9ಬಂಟ್ವಾಳ:ತೆಂಗು ಬೆಳೆಗಾರರು ಒಕ್ಕೂಟ ರಚಿಸುವ ಮೂಲಕ ಸರಕಾರದಿಂದ ಸಹಾಯಧನ ಪಡೆಯಲು ಸಾದ್ಯವಾಗುವುದೆಂದು ಬಂಟ್ವಾಳ ತಾಲೂಕು ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕ ಎ.ಸಂಜೀವ ನಾಯ್ಕ್ ಅವರು ಹೇಳಿದ್ದಾರೆ.
ಶಂಭೂರು ದ.ಕ.ಜಿ.ಪ ಹಿ.ಪ್ರಾ.ಶಾಲಾ ಸಭಾಂಗಣದಲ್ಲಿ ಭಾನುವಾರ ನಡೆದ ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 2013-14ರ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ತೆಂಗಿನಿಂದ ನೀರ ಉತ್ಪಾದನೆ ಹಾಗೂ ಇಲಾಖೆಯಿಂದ ಸಿಗುವ ಸವಲತ್ತುಗಳ ಮಾಹಿತಿ ನೀಡಿದರು.
ನರಿಕೊಂಬು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷೆ ಸೌಮ್ಯ ದಿವಾಕರ್ ಸಭೆಯ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲಿಯಾನ್ ಸಂಘ ಬೆಳೆದು ಬಂದ ಹಾದಿಯನ್ನು ವಿವರಿಸಿ ಭವಿಷ್ಯದಲ್ಲಿ ಸಂಘದ ವತಿಯಿಂದ ಕೈಗೊಳ್ಳಲಾಗುವ ಯೋಜನೆಯನ್ನು ಸಭೆಯ ಮುಂದಿಟ್ಟು ಎಲ್ಲರ ಸಹಕಾರ ಯಾಚಿಸಿದರು.
ಬಂಟ್ವಾಳ ತಾ.ಪಂ.ನ ನಿಕಟ ಪೂರ್ವ ಉಪಾಧ್ಯಕ್ಷ ಆನಂದ.ಎ.ಶಂಭೂರು ,ಆಲದ ಪದವು ಅಕ್ಷರ ಪ್ರತಿಷ್ಠಾನದ ನಿರ್ದೇಶಕ ದಿನೇಶ್ ಅಮೀನ್ ,ಮೆಲ್ಕಾರ್ ಯುವ ಸಂಗಮದ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಅವರು ಅತಿಥಿ ಸ್ಥಾನದಿಂದ ಮಾತನಾಡಿದರು.
ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘ ನಿಯಮಿತದ ಉಪಾಧ್ಯಕ್ಷ ಕೇಶವ ಪಿ,ಹೆಚ್,ಪುರಸಭೆಯ ಮಾಜಿ ಸದಸ್ಯ ಗೋಪಾಲ್ ಸುವರ್ಣ,ಬಂಟ್ವಾಳ ಆರಾಧನಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪೂಜಾರಿ,ಸಂಘದ ಉಪಾಧ್ಯಕ್ಷ ಲೋಕಯ್ಯ ಪೂಜಾರಿ, ನಿರ್ದೇಶಕರುಗಳಾದ ಮಾಧವ ಕೆ ನರಿಕೊಂಬು, ಮೋನಪ್ಪ ಪೂಜಾರಿಬೊಂಡಾಲ,ನಾರಾಯಣ ಪೂಜಾರಿ ಕೇದಿಗೆ, ಕೃಷ್ಣಪ್ಪ ಪೂಜಾರಿ ಬಾಳ್ತಿಲ,ರಾಜೇಶ್ ಶೇಡಿಗುರಿ,ಆರ್.ಅಶೋಕ ವರು ವೇದಿಕೆಯಲ್ಲಿದ್ದರು.
ಇದೇ ವೇಳೆ ಮೂರ್ತೆದಾರರಿಗೆ ಡಿವಿಡೆಂಟ್,ಮೂರ್ತೆದಾರರ ಮಕ್ಕಳಿಗೆ ವಿಧ್ಯಾರ್ಥಿವೇತನ ವಿತರಿಸಲಾಯಿತು.2014-15ನೇ ಸಾಲಿನ ವಿವಿಧ ಯೋಜನೆ ಕಾರ್ಯ ಚಟುವಟಿಕೆ ಹಾಗೂ ಅಂದಾಜು ಆಯ-ವ್ಯಯಕ್ಕೂ ಮಂಜೂರಾತಿ ನೀಡಲಾಯಿತು.
ಸಂಘದ ಕಾರ್ಯದರ್ಶಿ ಯೋಗೀಶ್ ಅಮೀನ್ ಸ್ವಾಗತಿಸಿ,ವಂದಿಸಿದರು.ವಸಂತ ಭೀಮಗದ್ದೆ ಕಾರ್ಯಕ್ರಮ
ನಿರೂಪಿಸಿದರು.

333p

By suddi9

Leave a Reply

Your email address will not be published. Required fields are marked *