accident-rutier

ಮೂಡುಬಿದಿರೆ: ಎರಡು ಕಾರುಗಳು ಪರಸ್ಪರ ಢಿಕ್ಕಿಹೊಡೆದ ಪರಿಣಾಮ ಓರ್ವ ಚಾಲಕ ಮೃತಪಟ್ಟ ಘಟನೆ ಇಲ್ಲಿನ ಮಿಜಾರು ಮೈಟ್ ಕಾಲೇಜು ಬಳಿ ಗುರುವಾರ ಸಂಜೆ ನಡೆದಿದೆ.

ಮೃತರನ್ನು ಮೂಡುಪೆರಾರ ನಿವಾಸಿ ಶಿವಾನಂದ ಶೆಟ್ಟಿ (65) ಎಂದು ಗುರುತಿಸಲಾಗಿದೆ.

ಲೊಕೇಶ್ ಎಂಬವರು ತನ್ನ ಶಿಪ್ಟ್ ಕಾರಿನಲ್ಲಿ ಮೂಡುಬಿದಿರೆಯಿಂದ ಮಂಗಳೂರಿನ ಕಡೆಗೆ ಹೋಗುತ್ತಿದ್ದ ವೇಳೆ ಮಿಜಾರಿನ ಬಳಿ ನಿಯಂತ್ರಣ ತಪ್ಪಿದ ಕಾರು ಮಂಗಳೂರು ಕಡೆಯಿಂದ ಮೂಡುಬಿದಿರೆಯತ್ತ ಹೋಗುತ್ತಿದ್ದ ಶಿವಾನಂದ ಶೆಟ್ಟಿಯವರ ಕಾರಿಗೆ ಢಿಕ್ಕಿ ಹೊಡೆದಿದ್ದು, ಘಟನೆಯಿಂದ ಶಿವಾನಂದ ಶೆಟ್ಟಿ ಗಂಭೀರ ಗಾಯಗೊಂಡಿದ್ದರು. ಬಳಿಕ ಶಿವಾನಂದರನ್ನುಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *