20080821udupi2

ಉಡುಪಿ: ಭದ್ರತಾ ಕಾರಣಕ್ಕಾಗಿ ಶ್ರೀ ಕೃಷ್ಣ ಮಠಕ್ಕೆ ಪ್ರಧಾನಿ ಭೇಟಿ ನೀಡಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರ ಹೇಳಿಕೆಗೆ ಮಠದ ಆಡಳಿತ ಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ.

ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಮಠ, ಪ್ರಧಾನಿ ಅವರ ಮೊದಲೇ ನಿಗದಿ ಪಡಿಸಿ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿ, ಕೃಷ್ಣ ಮಠದ ಭೇಟಿ ಇರಲಿಲ್ಲ. ಮೋದಿ ಅವರು ಉಡುಪಿಗೆ ಆಗಮಿಸಿದ್ದು, ಚುನಾವಣಾ ಪ್ರಚಾರಕ್ಕಾಗಿ. ಹೀಗಾಗಿ ಈ ವಿಚಾರಕ್ಕೆ ಬೇರೆ ಬಣ್ಣ ಬಳಿಯುವ ಅಗತ್ಯವಿಲ್ಲ ಎಂದು ಹೇಳಿದೆ.

ಕೃಷ್ಣಮಠದಲ್ಲಿ ಯಾವುದೇ ಭದ್ರತಾಲೋಪ ಇಲ್ಲ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಅನಿರೀಕ್ಷಿತವಾಗಿ ಮಠಕ್ಕೆ ಭೇಟಿ ನೀಡಿದ್ರೆ ಎನ್ನುವ ಮುಂದಾಲೋಚನೆಯಿಂದ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು, ಅಲ್ಲದೆ ಪೊಲೀಸರು ಕೂಡಾ ಎಲ್ಲಾ ರೀತಿಯಲ್ಲಿ ಸನ್ನದ್ಧರಾಗಿದ್ದರು. ಈ ವಿಚಾರವನ್ನು ಬೇರೆ ಆಯಾಮದಲ್ಲಿ ಚರ್ಚಿಸುವುದು ಅಗತ್ಯವಿಲ್ಲ ಎಂದಿದ್ದಾರೆ.

By suddi9

Leave a Reply

Your email address will not be published. Required fields are marked *