ಪೊಳಲಿ: ಬಾಬಾ ಫಕ್ರುದ್ದೀನ್ ಜುಮಾ ಮಸೀದಿ ಹಾಗೂ ಗೌಸುಲ್ ಅಹ್ ಲಾಂ ಯಂಗ್ ಮೆನ್ಸ್ ಅಸೋಸಿಯೇಶನ್ ಸಂಯುಕ್ತಾಶ್ರಯದಲ್ಲಿ ಮೇ 6ರಂದು ಬಾಬಾ ಫಕ್ರುದ್ದೀನ್ ತಂಙಳ್ ಅವರ ಆಂಡ್ ನೇರ್ಚೆ ಮತ್ತು ಬೃಹತ್ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮ ಇಲ್ಲಿನ ಬಾಬಾ ಫಕ್ರುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ವೇಳೆ ಬೆಳಗ್ಗೆ 11ಕ್ಕೆ ಮೌಲಿದ್ ಪಾರಾಯಣ ಹಾಗೂ ಖತಮುಲ್ ಖುರ್ ಆನ್ ಮತ್ತು ಕೂಟು ಝಿಯಾರತ್ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

