kamath-1

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವೇದವ್ಯಾಸ್ ಕಾಮತ್ ಮಂಗಳವಾರ ಚಿಲಿಂಬಿಗುಡ್ಡಕ್ಕೆ ಭೇಟಿ ಶ್ರೀ ರಾಮಾಂಜನೇಯ ಯುವಕ ಮಂಡಲದ ಮಿತ್ರರೊಡಗೂಡಿ ಸ್ಥಳೀಯ ದೈವ ದೇವರುಗಳ ಸನ್ನಿಧಾನಕ್ಕೆ ಭೇಟಿ ನೀಡಿ ಬಳಿಕ ಪ್ರಚಾರ ಕೈಗೊಂಡರು.

ಈ ವೇಳೆ ಮಾತನಾಡಿದ ಅವರು, ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಜನಪರ ನಿಲುವು, ಯೋಜನೆಗಳನ್ನು ವಿವರಿಸಿ ಕರ್ನಾಟಕದಿಂದ ಮೋದಿ ಸರ್ಕಾರಕ್ಕೆ ಅಭೂತಪೂರ್ವ ಬೆಂಬಲ ನೀಡಿ ಭಾರತೀಯ ಜನತಾ ಪಾರ್ಟಿಯನ್ನು ಗೆಲ್ಲಿಸಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಗುರುದತ್, ಹರೀಶ್ ಡಿ, ಪವನ್, ಶ್ಯಾಮ್ ಸುಂದರ್, ರಾಧಾಕೃಷ್ಣ, ಸುರೇಶ್ ಕಾಪಿಕಾಡ್, ನಾಗೇಂದ್ರ, ವಸಂತ್, ಶ್ರೀನಿವಾಸ ಪೈ, ಉಮಾನಾಥ್ ಅಮೀನ್, ವಿನಯ ನೇತ್ರ, ಸುರೇಖ ಹೆಗ್ಡೆ, ಸುನಿತಾ, ಮೋಹಿನಿ, ಸುನಂದ, ವತ್ಸಲ, ಲೋಲಾಕ್ಷಿ, ಪ್ರೇಮಲತಾ, ಚಂದ್ರಾವತಿ ಮುಂತಾದವರು ಸಾಥ್ ನೀಡಿದರು.

kamath2-e1524575413774

 

 

By Suddi9

Leave a Reply

Your email address will not be published. Required fields are marked *