ಬೆಂಗಳೂರು: ನಮಗೂ ಹಾಗೂ ಅನಂತಮೂರ್ತಿ ಅವರಿಗೂ ವೈಚಾರಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ ಅವರ ಬಗ್ಗೆ ನಮಗೆ ಗೌರವವಿದೆ. ಸಾಹಿತ್ಯ ಕ್ಷೇತ್ರಕ್ಕೆ ಅನಂತಮೂರ್ತಿ ಕೊಡುಗೆ ಅಪಾರ ಎಂದು ಆರ್.ಎಸ್.ಎಸ್ ಅ
ಬೆಂಗಳೂರಿನಲ್ಲಿ ಇಂದಿನಿಂದ ನಡೆಯುತ್ತಿರುವ ಎರಡು ದಿನಗಳ ಆರ್.ಎಸ್.ಎಸ್ ಶಿಬಿರ ಸಮರ್ಥಭಾರತದ ಆರಂಭದಲ್ಲಿಯೇ ಅನಂತಮೂರ್ತಿ ಅವರ ಸಾವಿಗೆ ಸಂತಾಪ ಸೂಚಿಸಲಾಯಿತು. ವೈಚಾರಿಕವಾಗಿ ಭಿನ್ನಾಭಿಪ್ರಾಯವಿದ್ದರೂ ಅನಂತಮೂರ್ತಿ ಅವರ ಬಗ್ಗೆ ಸಂಘಕ್ಕೆ ಗೌರವವಿದೆ ಎಂದು ಆರ್.ಎಸ್.ಎಸ್ ಹಿರಿಯರು ತಿಳಿಸಿದ್ದಾರೆ.
ಇದೇ ವೇಳೆ ಇತ್ತೀಚೆಗೆ ನಿಧನರಾದ ಖ್ಯಾತ ಯೋಗ ಗುರು ಬಿ.ಕೆ.ಎಸ್ ಅಯ್ಯಂಗಾರ್ ಅವರಿಗೂ ಆರ್.ಎಸ್.ಎಸ್ ತೀವ್ರ ಸಂತಾಪ ಸೂಚಿಸಿದೆ.
