623301456

ಮಂಗಳೂರು: ಕಾರೊಂದರಲ್ಲಿ ದಾಖಲೆ ರಹಿತವಾಗಿ ಸಾಗಟ ಮಾಡುತ್ತಿದ್ದ 12 ವಿದೇಶೀ ನಿರ್ಮಿತ ಲ್ಯಾಪ್ ಟಾಪ್ ಗಳ ಸಹಿತ ಒಟ್ಟು 15 ಲಕ್ಷ ರೂ. ಮೌಲ್ಯದ ಸೋತ್ತುಗಳನ್ನು ಮಂಗಳೂರು ಪೊಲೀಸರು ನಗರದ ಪಂಪೈಲ್ ಚೆಕ್ ಪೋಸ್ಟ್ ನಲ್ಲಿ ವಶಪಡಿಸುವಲ್ಲಿ ಬುಧವಾರ ರಾತ್ರಿ ಯಶಸ್ವಿಯಾಗಿದ್ದಾರೆ.

ನಗರದ ಪಂಪೈಲ್ ಚೆಕ್ ಪೋಸ್ಟ್ ನಲ್ಲಿ ಬುಧವಾರ ರಾತ್ರಿ ಕೇರಳ ನೋಂದಣಿಯ ಕಾರನ್ನು ತಡೆದು ನಿಲ್ಲಿಸಿ ತಪಾಸಣೆಗೆ ಒಳಪಡಿಸಿದಾಗ, ಕಾರಿನಲ್ಲಿ ವಿದೇಶಿ 12 ಲ್ಯಾಪ್ ಟಾಪ್ ಗಳು  ಸೌಂದರ್ಯ ವರ್ಧಕ ವಸ್ತುಗಳು, ಸಿಗರೇಟ್ ಗಳ ಪ್ಯಾಕೇಟ್ ಗಳು ಸಹಿತ ಒಟ್ಟು 15 ಲಕ್ಷ ರೂ. ಪತ್ತೆಯಾಗಿವೆ.

ವಶಕ್ಕೆ ಪಡೆಯಲಾದ ಸೊತ್ತುಗಳನ್ನು ಕೇರಳದ ಕೊಚ್ಚಿ ವಿಮಾನ ನಿಲ್ದಾಣದಿಂದ ಮಂಗಳೂರು ಮಾರ್ತಗವಾಗಿ ಮುಂಬೈ ಗೆ ಸಾಗಿಸಲಾಗುತ್ತಿತ್ತು  ಎಂದು ಕಾರಿನಲ್ಲಿದ್ದವರು ವಿಚಾರಣೆಯ ವೇಳೆ ಮಾಹಿತಿ ನೀಡಿದ್ದಾರೆ.

 

By Suddi9

Leave a Reply

Your email address will not be published. Required fields are marked *