ನೆಲ್ಯಾಡಿ: ಸುನ್ನೀ ಯುವ ಸಂಘ, ಸುನ್ನೀ ಸ್ಟುಡೆಂಟ್ ಫಡರೇಶನ್ ನೆಲ್ಯಾಡಿ ಸಂಯುಕ್ತಾಶ್ರಯದಲ್ಲಿ ಎ.15 ರಂದು ಬೃಹತ್ ಸುನ್ನೀ ಮಹಾ ಸಮ್ಮೇಳನ ನೆಲ್ಯಾಡಿಯಲ್ಲಿ ನಡೆಯಲಿದೆ.
ಅಂದು ನಡೆಯಲಿರುವ ಕಾರ್ಯಕ್ರಮದ ನೇತೃತ್ವವನ್ನು ಅಖಿಲ ಭಾರತ ಸುನ್ನೀ ಜಂಹಿಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ವಹಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿಯಾದ ಅಸೈಯ್ಯದ್ ಫಝಲ್ ಕೋಯಮ್ಮ ಕೂರ ತಂಘಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಶೈಖುನಾ ಬೇಕಲ್ ಉಸ್ತಾದ್ ಉಲ್ಭೂಧನೆ ಮಾಡಲಿದ್ದಾರೆ. ಮುಲ್ಲೂರ್ಕೆರೆ ಮುಹಮ್ಮದಲಿ ಸಖಾಫಿ ಮುಖ್ಯ ಪ್ರಭಾಷಣ ಗೈಯ್ಯಲಿದ್ದು, ಮುಖ್ಯ ಅಥಿತಿಗಳಾಗಿ ಅಸೈಯ್ಯದ್ ಸದಾತ್ ತಂಘಲ್, ಅಸೈಯ್ಯದ್ ಜಲಾಲುದ್ದೀನ್ ತಂಘಲ್, ಅಸೈಯ್ಯದ್ ಶಿಹಾಬುದ್ದೀನ್ ತಂಘಲ್ ಕೊಲ್ಲೂರು, ಕರ್ನಾಟಕ ರಾಜ್ಯ ಯೋಜನ ಆಯೋಗದ ಉಪಾಧ್ಯಕ್ಷ ಸಿ.ಎಂ ಇಬ್ರಾಹೀಂ, ಕರ್ನಾಟಕ ರಾಜ್ಯ ಆಹಾರ ಸಚಿವರಾದ ಯು.ಟಿ ಖಾದರ್, ಸಚಿವ ತನ್ವೀರ್ ಸೇಠ್ ಶಾಸಕ ಜಮೀರ್ ಅಹ್ಮದ್ ಖಾನ್, ಜನಾಬ್ ಬಿ. ಎಂ ಫಾರೂಖ್ ಹಾಜಿ, ಎನೆಪೋಯ ಅಬ್ದುಲ್ಲಾ ಕುಂಞಿ, ಮೌಲಾನಾ ಶಾಫೀ ಸಹದಿ ಬೆಂಗಳೂರು, ಎಸ್ ಎಸ್ ವೈ ರಾಜ್ಯಾಧ್ಯಕ್ಷ ಹುಸೈನ್ ಸಹದಿ ಎಸ್ಸೆಸೆಫ್ ರಾಜ್ಯಾಧ್ಯಕ್ಷ ಇಸ್ಮಾಯೀಲ್ ಸಖಾಫಿ, ಕರ್ನಾಟಕ ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ಎಂ. ಎಸ್ ಮಹಮ್ಮದ್, ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ ಮತ್ತಿತರರು ಭಾಗವಹಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

