ಕೈಕಂಬ: ಬಂಗ್ಲೆಗುಡ್ಡೆ ಸೂಪರ್ ಲೀಗ್(ಬಿಎಸ್ಸೆಲ್) ಆಶ್ರಯದಲ್ಲಿ ಗುರುಪುರ ಕುಕ್ಕದಕಟ್ಟೆಯ ಮೈದಾನದಲ್ಲಿ ಆಯೋಜಿಸಲಾದ 2018ರ ಸಾಲಿನ ಬಿಎಸ್ಸೆಲ್ ಟ್ರೋಫಿ ಟೂರ್ನಿಯನ್ನು ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್ ಉದ್ಘಾಟಿಸಿದರು.gur-mar-24-cricket-1

ಮಾ. 25, 26ರವರೆಗೆ ಮುಂದುವರಿಯಲಿರುವ ಈ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿದ್ದು, ಫೈನಲ್ ಪಂದ್ಯಕ್ಕೆ ಮುಂಚೆ ಪ್ರತಿಯೊಂದು ತಂಡ ಏಳು ಲೀಗ್ ಪಂದ್ಯ ಆಡಲಿವೆ. ವಿಜೇತ ತಂಡ ಆಕರ್ಷಕ ಟ್ರೋಪಿಯೊಂದಿಗೆ 40,000 ರೂ ನಗದು ಹಾಗೂ ದ್ವೀತೀಯ ವಿಜೇತ ತಂಡ ಟ್ರೋಪಿಯೊಂದಿಗೆ 30,000 ರೂ ನಗದು ಬಹುಮಾನ ಪಡೆಯಲಿದೆ. ಅಲ್ಲದೆ ಶ್ರೇಷ್ಠ ಬೌಲರ್, ಶ್ರೇಷ್ಠ ಬ್ಯಾಟ್ಸ್‍ಮ್ಯಾನ್ ಹಾಗೂ ಶ್ರೇಷ್ಠ ಕ್ಷೇತ್ರರಕ್ಷಕ ಪ್ರಶಸ್ತಿ ಗಳಿಸಲಿದ್ದಾರೆ. ಉದ್ಘಾಟನೆಯ ಸಂದರ್ಭದಲ್ಲಿ ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ಕಾಂಗ್ರೆಸ್ಸಿಗ ಪುರುಷೋತ್ತಮ ಮಲ್ಲಿ, ರಫೀಕ್ ಮೊದಲಾವರು ಇದ್ದರು.

By suddi9

Leave a Reply

Your email address will not be published. Required fields are marked *