4747474747

ಕಲಬುರಗಿ: ಕೆಪಿಎಸ್ಸಿ ನಡೆಸುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ವಾಟ್ಸಾಪ್ ಮೂಲಕ ಸೋರಿಕೆ ಮಾಡಿಕೊಂಡು, ಮೈಕ್ರೋಫೋನ್ ಮೂಲಕ ಉತ್ತರ ನೀಡುತ್ತಿದ್ದ ಬಂಧಿತರ ಸಂಖ್ಯೆ 12 ಕ್ಕೆ ಏರಿಕೆಯಾಗಿದೆ.

ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ಹಣ ಪಡೆದು, ಪರೀಕ್ಷೆ ವೇಳೆ ಫೋನ್ ಮೂಲಕ ಉತ್ತರ ನೀಡುತ್ತಿದ್ದವರ ಅಕ್ರಮ ಜಾಲ ಪತ್ತೆ ಹಚ್ಚಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಸಂಬಂಧ ಇಂದು ಮೈಮುದ್ ನದಾಫ್, ನಾಗರಾಜ ಟೆಂಗಳಿ, ಡಾ. ಕಾಮ್ರಾನ್ ಕೈಸರ್, ಅಬ್ದುಲ್ ನಜೀಬ್, ಹಝರತ್ ಅಲಿ ನದಾಫ್, ಇಮಾಮಸಾಬ ನದಾಫ್, ನಾಸೀರ್ ಅವರನ್ನು ಶುಕ್ರವಾರ ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

By suddi9

Leave a Reply

Your email address will not be published. Required fields are marked *