ಕುಡುಪು: ಜನ ನಾಯಕ ಎಂದೆನಿಸಿಕೊಂಡವನಿಗೆ  ಜನಾಶೀರ್ವಾದವೇ ಶ್ರೀ ರಕ್ಷೆಯಾಗಿದೆ ಎಂದು ಮಂಗಳೂರು ನೂತನ ಮೇಯರ್ ಭಾಸ್ಕರ.ಕೆ. ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ  ಕುಡುಪು ವಿವಿದ್ಧೋದ್ದೇಶ ಸಹಕಾರಿ ಸಂಘ ನಿಯಮಿತ ವತಿಯಿಂದ ಆಯೋಜಿಸಿದ್ದ  ವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಓರ್ವ ರಾಜಕಾರಣಿ  ನಿಸ್ವಾರ್ಥಿಯಾಗಿದ್ದರೆ ಮಾತ್ರ ಸಮರ್ಪಕವಾಗಿ  ಅಭಿವೃದ್ಧಿ ಕಾರ್ಯಗಳನ್ನು  ಅನುಷ್ಠಾನ ಗೊಳಿಸಲು ಸಾಧ್ಯ ಎಂದರು.

ಈ ವೇಳೆ ಸಂಘದ ವತಿಯಿಂದ  ನೂತನ ಮೇಯರಾಗಿ ಅಧಿಕಾರ ಸ್ವೀಕರಿಸಿದ  ಭಾಸ್ಕರ.ಕೆ. ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಜನಾರ್ದನ.ಬಿ., ಉಪಾಧ್ಯಕ್ಷ ನಾಗರಾಜ್ ಭಟ್, ನಿರ್ದೇಶಕರಾದ ರಾಘವೇಂದ್ರರ ಭಟ್, ಕೆ.ಕುಮಾರ, ಕೆ.ಚಂದ್ರಹಾಸ, ಯು.ರತ್ನಾಕರ, ಪ್ರಶಾಂತ್ ರಾವ್, ಉಮೇಶ್ ಬಂಗೇರ, ಮುಖೇಶ್ ಕುಮಾರ್, ಕವಿತಾ, ವೀಣಾ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜತ್ತಪ್ಪ ಆಳ್ವ ಸೇರಿ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *