ಪೊಳಲಿ:ಇತಿಹಾಶ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಜೀರ್ಣೋದ್ಧಾರ ಪ್ರಕ್ರೀಯೆಗಳು ನಡೆಯುವುದರಿಂದ ದೈವಜ್ಞರ ಸಲಹೆಯಂತೆ ಶಿಷ್ಟಾಚಾರಕ್ಕೆ ಅಪಚಾರವಾಗದಂತೆ, ಜೀರ್ಣೋದ್ಧಾರ ಕೆಲಸಕ್ಕೆ ಅಡಚಣೆಯಾಗದಂತೆ ಸರಳವಾಗಿ ಕೆಲವೊಂದು ಬದಲಾವಣೆಗಳೊಂದಿಗೆ ಕಾಲಾವಧಿ ಉತ್ಸವವನ್ನು ನಡೆಸಬೇಕೆಂದು ಅಭಿಪ್ರಾಯವನ್ನು ವ್ಯಕ್ತಪಡಿಸಿ ಪ್ರಶ್ನೆಯಲ್ಲಿ ಕಂಡುಬಂದ ಸೂಚನೆಯಂತೆ ತಂತ್ರಭಾಗ ಹೊರತಾಗಿ ಉಳಿದ ಸೇವೆಗಳೊಂದಿಗೆ ದೇವರು ಬಾಲಾಲಯದಲ್ಲಿದ್ದ ಕಾರಣ ಬಾಲಾಲಯಕ್ಕೆ ಪ್ರದಕ್ಷಿಣೆ ಬರುವುದು.ಎಲ್ಲಾ ರಥೋತ್ಸವಗಳು ರಥಬೀದಿಯಲ್ಲಿ ನಡೆಸುವುದು.
14ರಂದು ಬುಧವಾರ ಅಡಕೆ ಮರದ ಧ್ವಜಸ್ತಂಭವನ್ನು ಸ್ತಾಪನೆ ಮಾಡಲಾಗುವುದು. ಉಳಿಪಾಡಿಗುತ್ತಿನಿಂದ ಭಂಡಾರ ಬಂದ ನಂತರ ಧ್ವಜರೋಹಣ ನೆರವೇರಿಸಿ ಬಳಿಕ ಮಧ್ಯಾಹ್ನ ಪೂಜೆ ,ಬಯನ ಬಲಿ, ಪೀಠಪೂಜೆ ರಾತ್ರಿ ಪೂಜೆ ನೆರವೇರುವುದು.15ರಂದು ಗುರುವಾರ ಬೆಳಗ್ಗೆ 5.30ಕ್ಕೆ ದೀಪದ ಬಲಿ ಹೋರಡುವುದು .ಕಂಚಿಲು ಸೇವೆಗೆ ಅವಕಾಶ ಇದೆ.
* ನಿತ್ಯ ಬಲಿ ಉತ್ಸವ
ಸಂಜೆ 6 ಗಂಟೆಗೆ ಘಂಟಾಮಣಿ ಬಾರಿಸುವುದು. 6.30ಕ್ಕೆ ಬಲಿ ಹೊರಡುವ ಪೀಠ ಪೂಜೆ. ಉತ್ಸವದ ನಂತರ ವಸಂತ ಮಂಟಪದ ಪೂಜೆಯ ನಂತರ ಬಾಲಾಲಯಕ್ಕೆ ಹೋಗಿ ಪೀಠ ಪೂಜೆ ನಂತರ ನಿತ್ಯ ಪೂಜೆ.ಭೂತಬಲಿ ಇರುವುದಿಲ್ಲ.
* ದಂಡಮಾಲೆ ಉತ್ಸವ.
ರಾತ್ರಿ ಗಂಟೆ 7.ಕ್ಕೆ ಘಂಟಾಮಣಿ ಬಾರಿಸುವುದು. 7.30ಕ್ಕೆ ಉತ್ಸವ ಆರಂಭ ಹಿಂದಿನಂತೆ ಉಳಿದ ಸೇವೆಗಳು.
* ಚೆಂಡಿನ ಉತ್ಸವ.
ಚೆಂಡಿನ ಉತ್ಸವವನ್ನು ಸರಳ ರೀತಿಯಲ್ಲಿ ಸಂಜೆ 6. ಗಂಟೆಗೆ ಚೆಂಡಿನಗದ್ದೆಗೆ ಹೊರಟು ಮೂರು ಸಲ ಚೆಂಡನ್ನು ಹಾರಿಸಿ ತೆಗೆಯುವುದು. ರಾತ್ರಿ 7 ಗಂಟೆಯ ಮೊದಲು ದೀವಾಟಿಕೆ ಸಲಾಂ ನಡೆಯತ್ತದೆ.
ಪ್ರಥಮ ಚೆಂಡಿನಿಂದ ನಾಲ್ಕನೇ ಚೆಂಡಿನವರೆಗೆ ರಾತ್ರಿ 7 ಗಂಟೆಗೆ ಘಂಟಾಮಣಿ ಬಾರಿಸಿ 7.30ಕ್ಕೆ ಬಲಿ ಹೊರಡುವುದು. ಬೆಳಗ್ಗೆ ಚೂಣೋತ್ಸವ ಬಲಿ ಇದೆ.
ಕಡೆ ಚೆಂಡಿನ ಉತ್ಸವದಂದು 7.30ಕ್ಕೆ ಘಂಟಾಮಣಿ ಬಾರಿಸುವುದು. 8 ಗಂಟೆಗೆ ಉತ್ಸವ ಬಲಿ ಹೊರಡುವುದು.
* ರಥೋತ್ಸವ.
ಸಂಜೆ 6.30ರಿಂದ ರಥ ಬೀದಿಯಲ್ಲಿ ಅನಾನುಕೂಲ ಇರುವ ಕಾರಣ ಬ್ರಹ್ಮ ರಥವನ್ನು ರಥಬೀದಿಯಲ್ಲಿ ಎಳೆಯದೇ ನೇರ ಚೆಂಡಿನ ಗದ್ದೆಗೆ ಎಳೆಯುವುದು. ಸುಡುಮದ್ದು ಪ್ರದರ್ಶದ ನಂತರ ಪುನಃ ಯಥಾ ಸ್ಥಾನಕ್ಕೆ ತಂದು ನಿಲ್ಲಿಸುವುದು.
* ಅವಭೃತ
ಕವಾಟೋದ್ಘಾಟನೆ ನಂತರ ಪ್ರಸಾದ ವಿತರಣೆ ಎಂದಿನಂತೆ ನಡೆಯುತ್ತದೆ. ತುಲಾಭಾರ ಸೇವೆ ಇರುವುದಿಲ್ಲ .ರಾತ್ರಿಉತ್ಸವದ ಕೊನೆಯ ಸಮಯದಲ್ಲಿ ಅವಭೃತ , ಧ್ವಜಾಅವರೋಹಣ ನಡೆಯುತ್ತದೆ. ಅನಿವಾರ್ಯವಾಗಿ ಬದಲಾದ ಪರಿಸ್ಥಿತಿಗೆ ಯಾವ ಅಸಮಾಧಾನಗಳನ್ನು ವ್ಯಕ್ತಪಡಿಸದೆ ಎಲ್ಲರೂ ದೇವರ ಸೇವಯಲ್ಲಿ ಪಾಲ್ಗೊಳ್ಳಬೇಕಾಗಿ ದೇವಳದ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.
