ಬಂಟ್ವಾಳ:ತಾಲ್ಲೂಕಿನಲ್ಲಿ ಸುಮಾರು 350 ವರ್ಷಗಳ ಹಿನ್ನೆಲೆ ಹೊಂದಿರುವ ಬಂಟ್ವಾಳ ಪೇಟೆ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ದೇವರ ವಿಗ್ರಹ ಪುನರ್ ಪ್ರತಿಷ್ಠೆಗೊಂಡು 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ‘ಪುನರ್ ಪ್ರತಿಷ್ಠಾ ಶತಮಾನೋತ್ಸವ’ ಕಾರ್ಯಕ್ರಮ ಪ್ರಯುಕ್ತ ಕಾಶಿ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ದೇವರ ವಿಗ್ರಹಕ್ಕೆ ಸ್ವತಃ ‘ಶತಕಲಶಾಭಿಷೇಕ’ ನೆರವೇರಿಸಿದರು.
ಬಂಟ್ವಾಳ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಶತಮಾನೋತ್ಸವ ಪ್ರಯುಕ್ತ ಕಾಶಿ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಮಂಗಳವಾರ ರಾತ್ರಿ ಗೋಪುರ ಉತ್ಸವ ಪೂಜೆ ನೆರವೇರಿಸಿದರು.
ಬಂಟ್ವಾಳ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವರಿಗೆ ಪುನರ್ ಪ್ರತಿಷ್ಠಾ ಶತಮಾನೋತ್ಸವ ಪ್ರಯುಕ್ತ ಕಾಶಿ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ದೇವರ ವಿಗ್ರಹಕ್ಕೆ ಸ್ವತಃ ಶತಕಲಶಾಭಿಷೇಕ ನೆರವೇರಿಸಿದರು.
ಬಂಟ್ವಾಳ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಶತಮಾನೋತ್ಸವ ಪ್ರಯುಕ್ತ ಮಂಗಳವಾರ ರಾತ್ರಿ ನಡೆದ ದಿಗ್ವಿಜಯೋತ್ಸವ ಮತ್ತು ಬೆಳ್ಳಿ ಲಾಲ್ಕಿ ಉತ್ಸವ ಕಾರ್ಯಕ್ರಮದಲ್ಲಿ ಕಾಶಿ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಸಹಿತ ಅಪಾರ ಮಂದಿ ಭಕ್ತರು ಸಂಭ್ರಮದಿಂದ ಪಾಲ್ಗೊಂಡರು.
ಬಂಟ್ವಾಳತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಶತಮಾನೋತ್ಸವ ಪ್ರಯುಕ್ತ ಕಾಶಿ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಮಂಗಳವಾರ ಸಂಜೆ ಗೋಪೂಜೆ ನೆರವೇರಿಸಿದರು.
ಇದೇ 3ರಿಂದ ಮೊದಲ್ಗೊಂಡು 8ರತನಕ ವಿವಿಧ ಧಾರ್ಮಿಕ ವಿಧಿ ವಿಧಾನ ಸಹಿತ ಹೋಮ ಹವನ ಮತ್ತಿತರ ಪೂಜಾ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಕಾಶಿ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಮಂಗಳವಾರ ಸಂಜೆ ಗೋಪೂಜೆ ನೆರವೇರಿಸಿದರು. ರಾತ್ರಿ ನಡೆದ ಗೋಪುರೋತ್ಸವ, ಬೆಳ್ಳಿ ಲಾಲ್ಕಿ ಉತ್ಸವ, ಸ್ವಾಮೀಜಿ ಅವರನ್ನು ವಿಶೇಷ ಅಲಂಕಾರಗೊಂಡ ಪಲ್ಲಕಿ ಮೆರವಣಿಗೆ, ದಿಗ್ವಿಜಯೋತ್ಸವ ಮತ್ತಿತರ ಪಾರಂಪರಿಕ ಉತ್ಸವದಲ್ಲಿ ಅಪಾರ ಮಂದಿ ಭಕ್ತರು ಪಾಲ್ಗೊಂಡು ಸಂಭ್ರಮ ಪಟ್ಟರು.
ದೇವಳದ ಆಡಳಿತ ಮೊಕ್ತೇಸರ ಬಿ.ಪುರುಷೋತ್ತಮ ಶೆಣೈ, ಮೊಕ್ತೇಸರರಾದ ಎ.ಗೋವಿಂದ ಪ್ರಭು, ಪಣಂಬೂರು ಪ್ರವೀಣ ಕಿಣಿ ಮತ್ತಿತರರು ಇದ್ದರು.

