ಬೆಂಗಳೂರು : ತಮ್ಮ ಕೆಪಿಜೆಪಿ ಪಕ್ಷದಲ್ಲಿನ ಭಿನ್ನಮತ ಸಂಬಂಧ ಇಂದು ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಉಪೇಂದ್ರ ಕೆಪಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
ರೆಸಾರ್ಟ್ನಲ್ಲಿ ತನ್ನ ಬೆಂಬಲಿಗರ ಸಭೆ ನಡೆಸಿದ ಉಪೇಂದ್ರ ಕೆಪಿಜೆಪಿ ಪಕ್ಷದ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿದ್ದಾರೆ. ತಾವು ಕೆಪಿಜೆಪಿಗೆ ವಿದಾಯ ಹೇಳುತ್ತಿದ್ದೇವೆ. ಪ್ರಜಾಕೀಯದ ಕಾನ್ಸೆಪ್ಟ್ ನಲ್ಲೇ ಬೇರೆ ಪಕ್ಷವನ್ನು ಘೋಷಣೆ ಮಾಡಲಿದ್ದೇವೆ. ಆದಷ್ಟು ಬೇಗ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡುತ್ತೇವೆ.ವಿಧಾನಸಭೆ ಆಗದಿದ್ದರೆ, ಲೋಕಸಭೆ, ಗ್ರಾಪಂ ಚುನಾವಣೆಗಳಿಗೂ ಸ್ಪರ್ಧಿಸುತ್ತೇವೆ ಎಂದರು.
ನಂತರ ಉಪ್ಪಿ ಕಾರ್ಯಕರ್ತರಿಗೆ ಯೋಚನೆ ಮಾಡಿ ಒಮ್ಮತಕ್ಕೆ ಬನ್ನಿ ಎಂದು ಮನವಿ ಮಾಡಿ 15 ನಿಮಿಷ ಸಮಯ ನೀಡಿ ಸಮಧಾನವಾಗಿ ಯೋಚನೆ ಮಾಡಿ ಎಂದು ಸಭೆಯಿಂದ ಹೊರನಡೆದರು. ಉಪೇಂದ್ರ ನಿರ್ಗಮನದ ನಂತರ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಮ್ಮತದ ನಿರ್ಧಾರಕ್ಕಾಗಿ ಸಮಾಲೋಚನೆ ಮುಂದುವರೆಸಿದ್ದರು. ಬಳಿಕ, ಮತ್ತೆ ಸಭೆ ನಡೆಸಿ ತಮ್ಮ ನಿರ್ಧಾರ ಪ್ರಕಟಿಸಿದರು.

