??????????

ಬೈಲಹೊಂಗಲ: ತಾಲ್ಲೂಕಿನ ನಯಾನಗರ ಗ್ರಾಮದ ಮಲಪ್ರಭಾ ನದಿ ದಡದಲ್ಲಿರುವ ರೈತರ ಪಂಪಸೆಟಗಳಿಗೆ ವಿದ್ಯುತ್ ಕಡಿತಗೊಳಿಸಿದ್ದರಿಂದ ರೈತ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.

ಗ್ರಾಮದ ಪಾಂಡುರಂಗ ಯಲ್ಲಪ್ಪ ಸಿದ್ರಾಮನ್ನವರ (35) ಆತ್ಮಹತ್ಯೆಗೆ ಶರಣಾದ ರೈತ. ಈತನ 12 ಎಕರೆ ಜಮೀನಿನಲ್ಲಿ ಅಳವಡಿಸಲಾಗಿದ್ದ ಪಂಟಸೆಟಗೆ ಪುರಸಭೆಯವರು ಜಿಲ್ಲಾಧಿಕಾರಿ ಆದೇಶ ಮೆರೆಗೆ ನದಿ ತೀರದ ರೈತರ ಜಮೀನುಗಳಿಗೆ ಭೇಟಿ ನೀಡಿ ಹೆಸ್ಕಾಂನವರಿಂದ ಪಂಪಸೆಟಗೆ ಅಳವಡಿಸಿದ್ದ ವಿದ್ಯುತ್ ಕಡಿತಗೊಳಿಸಿದ್ದರು. ಬೆಳೆದ ಬೆಳೆ ಕೈಗೆ ಬಾರದೆಂಬ ಕಾರಣಕ್ಕೆ ಮನನೊಂದ ರೈತ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ರೈತನಿಗೆ ಮದುವೆಯಾಗಿರಲಿಲ್ಲ. ತಂದೆ, ತಾಯಿ, ನಾಲ್ಕು ಜನ ಸಹೋದರರನ್ನು ಅಗಲ್ಲಿದ್ದಾನೆ. ಈ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಗ್ರಾಮದ ರೈತರು ಮೃತ ರೈತನ ಶವವನ್ನು ಟ್ರ್ಯಾಕ್ಟರನಲ್ಲಿಟ್ಟುಕೊಂಡು ಬೈಲಹೊಂಗಲ ಪುರಸಭೆ ಮುಖ್ಯ ರಸ್ತೆ ಎದುರು ತಂದು ಮೃತ ರೈತನಿಗೆ ಪರಿಹಾರ ಧನ ನೀಡಬೇಕು ಎಂದು ಹಕ್ಕೂತ್ತಾಯ ಮಾಡಿದರು.

ಈ ವೇಳೆ ರಸ್ತೆ ಪಕ್ಕದ ಅಂಗಡಿಗಳು ಕೆಲಕಾಲ ಬಂದ್ ಆಗಿದ್ದವು.
ವಿನಾಕಾರಣ ರೈತರ ಪಂಪಸೆಟ್‍ಗಳ ವಿದ್ಯುತ್ ಕಡಿತಗೊಳಿಸಿದ ಪುರಸಭೆಯವರಿಗೆ, ಹೆಸ್ಕಾಂನವರಿಗೆ ದಿಕ್ಕಾರ ಕೂಗಿದರು. ರೈತರ ಪ್ರತಿಭಟನೆ ಕಾವೇರುತ್ತಿದ್ದಂತೆ ಸ್ಥಳಕ್ಕೆ ಬಂದ ಡಿವೈಎಸ್ಪಿ ಜೆ.ಎಂ.ಕರುಣಾಕರಶಟ್ಟಿ, ಸಿಪಿಐ ಸಂಗನಗೌಡ ಧರಣಿ ನಿರತ ರೈತರ ಮನ ಒಲಿಸಲು ಯತ್ನಿಸಿದರು. ಅಧಿಕಾರಿಗಳ ಮಾತಿಗೆ ಕಿವಿಗೊಡದ ರೈತರು ತಮ್ಮ ಆಕ್ರೋಶ ಹೊರ ಹಾಕಿದರು. ಈ ವೇಳೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಆಗ ಸ್ಥಳಕ್ಕೆ ಬಂದ ತಹಶೀಲ್ದಾರ ಪ್ರಕಾಶ ಗಾಯಕವಾಡ, ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ಪುರಸಭೆ ಅಧ್ಯಕ್ಷ ರಾಜಶೇಖರ ಮೂಗಿ ಅವರಿಗೆ ರೈತರು ಘೇರಾವ ಹಾಕಿ ಘೋಷಣೆ ಕೂಗಿದರು. ಯಾವುದೆ ತಪ್ಪು ಮಾಡದ ಬಡ ರೈತನ ಜೀವಕ್ಕೆ ಕುತ್ತೂ ತಂದೊಡಿದ ಪುರಸಭೆಯವರ ನಿರ್ಣಯಕ್ಕೆ ದಿಕ್ಕಾರ ಹೇಳಿದರು.

ಪದೇ, ಪದೇ ನಯಾನಗರ ಗ್ರಾಮದ ನದಿ ತೀರದ ರೈತರ ಜಮೀನಿನ ಪಂಪಸೆಟ್‍ಗಳ ವಿದ್ಯುತ್ ಕಡಿತಗೊಳಿಸಿ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ದೊಡ್ಡ ಕೊಟ್ಟವರಿಗೆ ಮಾತ್ರ ಹೆಸ್ಕಾಂನವರು ವಿದ್ಯುತ್ ಸರಬರಾಜು ಮಾಡುತ್ತಾರೆ. ಪುರಸಭೆ ಸಿಬ್ಬಂದಿ ಮಲ್ಲಪ್ಪ ಪಟ್ಟಿಹಾಳ ಎಂಬಾತ ದುಡ್ಡು ಕೊಟ್ಟ ರೈತರಿಗೆ ಮಾತ್ರ ವಿದ್ಯುತ್ ಪಡೆಯಲು ಅವಕಾಶ ಕಲ್ಪಿಸುತ್ತಾನೆ. ಪುರಸಭೆಯವರು, ಹೆಸ್ಕಾಂನವರು ರೈತರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಂಡು ರೈತರ ಜೀವ ಹಾನಿಗೆ ಕಾರಣಿಕರ್ತರಾಗುತ್ತಿದ್ದಾರೆ ಎಂದು ಆಪಾದಿಸಿದರು. ರೈತ ಮುಖಂಡ ಮುದಕಪ್ಪ ತೋಟಗಿ, ಪ್ರಕಾಶ ಅಡಕಿ, ಯಲ್ಲಪ್ಪ ಏಣಗಿ, ಭೀಮಪ್ಪ ಕರಿದೇಮನ್ನವರ, ಮಹಾದೇವ ಅಸುಂಡಿ, ಸಿದ್ದಪ್ಪ ಉಜ್ಜನಕೊಪ್ಪ, ರಾಜೇಂದ್ರ ಹರ್ತಿ ಸೇರಿದಂತೆ ನಯಾನಗರ, ಬೈಲಹೊಂಗಲ ರೈತರು ಇದ್ದರು.

ಪುರಸಭೆಯಿಂದ ತುರ್ತು ಸಭೆ:
ಪುರಸಭೆ ತುರ್ತು ಸಭೆಯಲ್ಲಿ ಗ್ರಾಮಸ್ಥದ ಪ್ರಮುಖರ ಸಮ್ಮುಖ 20 ಲಕ್ಷ ರೂ.ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮಾರ್ಚ 6 ರಂದು ತುರ್ತು ಸಭೆ ಕರೆಯಲಾಗಿದೆ ಎಂದು ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ಅಧ್ಯಕ್ಷ ರಾಜಶೇಖರ ಮೂಗಿ ತಿಳಿಸಿದರು. ಈ ವೇಳೆ ಲಿಖಿತವಾಗಿ ಪಂಪಸೆಟ್ ವಿದ್ಯುತ್ ಕಡಿತಗೊಳಿಸದಂತೆ ಪ್ರತಿಭಟನಾಕಾರರು ಪಟ್ಟು ಹಿಡಿದಾಗ ಮುಖ್ಯಾಧಿಕಾರಿ, ಅಧ್ಯಕ್ಷರು ಲಿಖಿತವಾಗಿ ವಿದ್ಯುತ್ ಕಡಿತಗೊಳಿಸುವದಿಲ್ಲವೆಂದು ಬರೆದುಕೊಟ್ಟರು. ಆಗ ಪ್ರತಿಭಟನಾಕಾರರು ಹಿಪಡೆದು ಶವವನ್ನು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದರು.

ಮೃತ ರೈತನ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ಸರ್ಕಾರದಿಂದ ಪರಿಹಾರ ಧನ ನೀಡಲಾಗುವದು. ಪುರಸಭೆಯವರು ಇನ್ಮೂದೆ ರೈತರ ಪಂಪಸೆಟಗಳಿಗೆ ವಿದ್ಯುತ್ ಕಡಿತಗೊಳಿಸುವದಿಲ್ಲವೆಂದು ಭರವಸೆ ನೀಡಿದ್ದಾರೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿಗೆ ಇದ್ದಾಗ ಜಮೀನುಗಳಿಗೆ ಬಳಕೆ ಮಾಡಲು ಯಾವ ತೊಂದರೆ ಇಲ್ಲ. ಬೇಸಿಗೆ ಇರುವದರಿಂದ ಪಟ್ಟಣ ಜನತೆಗೆ ಕುಡಿಯುವ ನೀರಿನ ಕೊರತೆ ಆಗದಂತೆ ಮುಂಜಾಗೃತವಾಗಿ ಪಂಪಸೆಟ್ ವಿದ್ಯುತ್ ಕಡಿತಗೊಳಿಸಲಾಗುತ್ತು ವಿನಃ ರೈತರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಮುನ್ನೆಚ್ಚರಿಕೆವಹಿಸಲಾಗುವದು.
ಪ್ರಕಾಶ ಗಾಯಕವಾಡ, ತಹಶೀಲ್ದಾರ, ಬೈಲಹೊಂಗಲ

By suddi9

Leave a Reply

Your email address will not be published. Required fields are marked *