ಮಂಗಳೂರು: ಛಾಯಾಗ್ರಾಹಕರ ವಿವಿಧ ಬೇಡಿಕೆಗಳ ಬಗ್ಗೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ದಕ್ಷಿಣ ಕನ್ನಡ ಜಿಲ್ಲೆ – ಉಡುಪಿ ಜಿಲ್ಲೆ ವತಿಯಿಂದ ಸಂಘದ ಜಿಲ್ಲಾಧ್ಯಕ್ಷರಾದ ವಿಲ್ಸನ್ ಗೊನ್ಸಾಲ್ವಿಸ್ ಅವರು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು, ಅರಣ್ಯ ಸಚಿವ ರಮಾನಾಥ ರೈ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮನವಿ ನೀಡಿದರು.
ಮನವಿಯಲ್ಲಿ ಏನೇನಿದೆ.
* ಸಂಘ ನೀಡಿರುವ ಗುರುತು ಚೀಟಿಗೆ ಸರಕಾರದಿಂದ ಮಾನ್ಯತೆ, ಸರಕಾರಿ ನೌಕರಿಯೊಂದಿಗೆ ಛಾಯಾಗ್ರಹಣ ವೃತ್ತಿ ನಡೆಸುವ ಅಧಿಕಾರಿಗಳನ್ನು ಸರಕಾರಿ ಸೇವೆಯಿಂದ ಅಮಾನತುಗೊಳಿಸಬೇಕು, ಸರಕಾರಿ ಕಛೇರಿಗಳ ಮತ್ತು ಸರಕಾರಿ ಸಭೆ ಸಮಾರಂಭಗಳ ಛಾಯಗ್ರಹಣವನ್ನು ವೃತ್ತಿ ಬಾಂಧವರಿಗೆ ನೀಡಬೇಕು, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡಬೇಕು, ಛಾಯಗ್ರಾಹಕ ಪ್ರತ್ಯೇಕ ಅಕಾಡೆಮಿ ಸ್ಥಾಪನೆಯಾಗಬೇಕು,ಪ್ರತಿ ವಲಯಗಳಲ್ಲಿ ಛಾಯಾಭವನ ನಿರ್ಮಾಣಕ್ಕೆ ನಿವೇಶನ ಅನುದಾನ ಮಾಡಿಕೊಡಬೇಕು, ಛಾಯಾಗ್ರಾಹಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು .ಇಂತಹ ಹಲವಾರು ವಿಷಯಗಳ ಬಗ್ಗೆ ಮನವಿ ಮಾಡಲಾಯಿತು.
*ಮನವಿಗೆ ಸಚಿವರು ಸಕಾರಾತ್ಮಕ ಸ್ಪಂದನೆ .
ಈ ಸಂದರ್ಭ ಜಿಲ್ಲಾ ಸಂಚಾಲಕ ವಿಠ್ಠಲ ಚೌಟ ಮಂಗಳೂರು, ಸಲಹಾ ಸಮಿತಿ ಸದಸ್ಯರು ಜಗನ್ನಾಥ ಶೆಟ್ಟಿ ಮಂಗಳೂರು, ಕಾರ್ಯದರ್ಶಿ ದಯಾನಂದ ಬಂಟ್ವಾಳ, ಪತ್ರಿಕಾ ಪ್ರತಿನಿಧಿ ಸುರೇಶ್ ಕೌಡಂಗೆ, ಮಂಗಳೂರು ವಲಯಾಧ್ಯಕ್ಷ ಪದ್ಮನಾಭ ಮಂಗಳೂರು, ಬಂಟ್ವಾಳ ವಲಯಾಧ್ಯಕ್ಷ ಹರೀಶ್ ಮಾಣಿ, ಗೌರವಾಧ್ಯಕ್ಷ ಸುಕುಮಾರ್ ಬಂಟ್ವಾಳ, ಜಿಲ್ಲಾ ಮಾಜಿ ಉಪಾಧ್ಯಕ್ಷರು ಹರೀಶ್ ಬಂಟ್ವಾಳ, ಜಿಲ್ಲಾ ಪದಾಧಿಕಾರಿಗಳು ಹಾಗೂ ವಲಯಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
