ಕೊಪ್ಪಳ : ಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 60 ಹಾಗೂ ಜೆಡಿಎಸ್ 20 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲೋದಿಲ್ಲ ಎಂದು ಹುಲಿಗಿಯ ಹುಲಿಗೆಮ್ಮದೇವಿ ಸನ್ನಿಧಾನದಲ್ಲಿ ನಿಂತು ಹೇಳುವೆಂದು ಬಳ್ಳಾರಿ ಸಂಸದ ಬಿ. ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ.
ತಾಲೂಕಿನ ಹುಲಿಗೆಮ್ಮ ದೇವಸ್ಥಾನದ ಬಳಿ ಸೋಮವಾರ ಉಜ್ವಲ ಯೋಜನೆಯ ರಥ ಯಾತ್ರೆಗೆ ಚಾಲನೆ ನೀಡಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದುರಾಡಳಿ ನಡೆಸಿ ದುರಹಂಕಾರ, ಅಹಂಕಾರ ಹೆಚ್ಚಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೀಸಲಿಟ್ಟ ಅನುದಾನವನ್ನು ಬೇರೆ ಯಾವುದಕ್ಕೆ ಬಳಸಬಾರದು ಎಂಬ ಕಾನೂನಿನ ನಿಯಮವಿದ್ದರೂ ಕೂಡ ದುರಹಂಕಾರದಿಂದ ಇವರು ಪರಿಶಿಷ್ಟರ ಅನುದಾನ ರೈತರ ಸಾಲ ಮನ್ನಾಕ್ಕೆ ಬಳಿಸಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆರೋಪಿಸಿದರು.
ರಾಹುಲ್‌ಗಾಂಧಿ ಚುನಾವಣೆ ಗಿಮಿಕ್‌ಗಾಗಿ ರಾಜ್ಯದಲ್ಲಿ ಪ್ರವಾಸ ನಡೆಸಿದ್ದು, ಕಾಯಕವೇ ಕೈಲಾಸ ಎಂದು ಬವಸಣ್ಣನವರ ವಚನದಂತೆ ನಡೆದುಕೊಳ್ಳಬೇಕು ಎಂದು ಹೇಳುವ ರಾಹುಲ್‌ಗಾಂಧಿಗೆ ಬಸವಣ್ಣನವರ ವಚನವೂ ಕೂಡ ಸರಿಯಾಗಿ ಹೇಳಲಿಕ್ಕೆ ಬರುತ್ತಿಲ್ಲ. ಇಷ್ಟು ವರ್ಷಗಳ ಕಾಲ ನೆನಪಗಾದ ಬಸವಣ್ಣನವರ ವಚನ ಈಗ ಏಕೆ ನೆಪಾಗುತ್ತದೆ. ಇದು ಚುನಾವಣೆಯ ಗಿಮಿಕ್ ಅಲ್ಲದೇ ಬೇರೆನು ಅಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಕೂಡಲೇ ಬಸವಣ್ಣನವರ ವಚನದಂತೆ ದೇಶದ ಅಭಿವೃದ್ಧಿಗೆ ಕಾಯಕದಲ್ಲಿ ಮಗ್ನರಾಗಿದ್ದಾರೆ. ಇದರಿಂದ ರಾಹುಲ್ ಗಾಂಧಿ ರಾಜ್ಯಕ್ಕೆ ಬಂದರೂ ಕೂಡ ಎಲ್ಲರೂ ಮೋದಿ ಮೋದಿ ಎಂದು ಕೂಗುತ್ತಾರೆ. ಇದರಿಂದ ಮೋಧಿ ವರ್ಚಸ್ಸು ಹೇಗೆ ಇದೆ ಎಂದು ಗೊತ್ತಾಗುತ್ತದೆ ಎಂದು ಹೇಳಿದರು.

