0025

ಕುಡುಪು: ನಾವು ಕ್ಷುಲ್ಲಕ ಕಾರಣಕ್ಕೆ ಜಾತಿ, ಧರ್ಮದ ಹೆಸರಿನಲ್ಲಿ ಸಂಘರ್ಷಕ್ಕಿಳಿದರೆ  ಇಲ್ಲಿನ ಸಂಸ್ಕೃತಿಯ  ಬೇರು ಕಿತ್ತು ಹೋಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ  ಆತಂಕ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಇಲ್ಲಿನ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಸ್ಮಯ ರೀತಿಯಲ್ಲಿ ಇಲ್ಲಿನ  ಅನಂತ ಪದ್ಮನಾಭ ದೇವಸ್ಥಾನ  ಬೆಳೆದಿದೆ. ಅಲ್ಲದೆ, ಪವಾಡಸದೃಶವಾಗಿ  ನಿಂತಿದೆ ಎಂದವರು, ಶ್ರದ್ಧೆ ಭಕ್ತಿ ಮುನುಷ್ಯನಲ್ಲಿ  ಮುಖ್ಯವಾಗಿದ್ದು, ದೈ ಹಿಕ ಶುದ್ಧಿಯಿಂದ ದೇವರಲ್ಲಿ  ಭಕ್ತಿ ಮಾಡಿದರೆ ಶೂನ್ಯತೆ ಮನಸು ತುಂಬುತ್ತದೆ. ಇದರಿಂದ ಜೀವನದಲ್ಲಿ ಸುದೀರ್ಘ ಕಾಲದಲ್ಲಿ ಯಶಸ್ಸು ಕಾಣಲು ಸಾಧ್ಯ. ಯಾವುದೇ ದೇವರಲ್ಲಿ ಭಕ್ತಿ ಮಾರ್ಗದಿಂದ ಪ್ರಾರ್ಥನೆ ಮಾಡಿದರೆ ಪ್ರತಿಫಲ ಕಾಣಲು ಸಾಧ್ಯ  ಎಂದು ತಿಳಿಸಿದರು.

ವೇಮೂಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ, ಕೇವಲ ದೇವಸ್ಥಾನ ನೇತೃತ್ವ ವಹಿಸಿಕೊಂಡರೆ ಸಾಲದು ನಾವು ಧಾರ್ಮಿಕ ಸಂಸ್ಕೃತಿ, ವೈಜ್ಞಾನಿಕವಾಗಿರುವ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೆಕು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲೋಕ ಸೇವಾ ಆಯೋಗದ  ಅಧ್ಯಕ್ಷ ಡಾ.ಶ್ಯಾಮ್ ಭಟ್, ದ.ಕ. ಹಾಲು ಉತ್ಪಾದಕ ಡಳಿತ ಕ್ಕುಟದ ನಿರ್ದೇಶಕ ಸತ್ಯ ನಾರಾಯಣ ರಾವ್ ಮತ್ತಿತರರು ಉಪಸ್ಥಿತರಿದ್ದರು.

ವಾಸುದೇವ ರಾವ್ ಕುಡುಪು ಸ್ವಾಗತಿಸಿ ರಾಮ  ಎಲ್ಲಂಗಳ ವಾಮಂಜೂರು  ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *