ಮಂಗಳೂರು: ದ.ಕ.ಜಿಲ್ಲೆಯ ಸುಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತ್ ಷಾ ಇಂದು ಬೆಳಗ್ಗೆ ಭೇಡಿ ನೀಡಿದ್ದಾರೆ.
ಕೊಂಚ ಅನಾರೋಗ್ಯದಿಂದ ಬಳಲುತಿದ್ದ ಶಾ ಅವರು ಕುಕ್ಕೆ ದೇವರ ದರ್ಶನ ಪಡೆದು, ಷಾ ಹೆಸರಿನಲ್ಲಿ ಅರ್ಚಕರು ಕುಕ್ಕೆ ಸುಬ್ರಹ್ಮಣ್ಯನಿಗೆ ಅರ್ಚನೆ ಸಲ್ಲಿಸಿ ಬಳಿಕ ಸುಬ್ರಹ್ಮಣ್ಯ ಸ್ವಾಮೀಜಿಯನ್ನು ಭೇಟಿಯಾದರು.
ಈ ವೇಳೆ ಸ್ವಾಮೀಜಿಯವರು ಅಮಿತ್ ಶಾ ಅವರಿಗೆ ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ಮುಖಂಡ ಸಂತೋಷ್ ಜಿ, ಶಾಸಕ ಅಂಗಾರ, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಟಂದೂರು, ಪಕ್ಷದ ಸ್ಥಳೀಯ ಮುಖಂಡರಾದ ವೆಂಕಟ್ ದಂಬೆಕೋಡಿ, ಎ.ವಿ.ತೀರ್ಥರಾಮ ಮತ್ತಿತರರಿದ್ದರು.


