788

ವಿಟ್ಲ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ನೂತನ ವಿಟ್ಲ ಘಟಕದ ಉದ್ಘಾಟನಾ ಸಮಾರಂಭದ ಪೂರ್ವಭಾವಿ ಸಭೆ ಇಲ್ಲಿನ ಶ್ರೀ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.

787

ಸಭೆಯ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ ವಿಟ್ಲ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ  ಸತೀಶ್ ಆಳ್ವ ಇರಾ, ಗೌರವಾಧ್ಯಕ್ಷರಾಗಿ  ಕೃಷ್ಣಯ್ಯ ಅರಸ, ಪ್ರಧಾನ ಕಾರ್ಯದರ್ಶಿಯಾಗಿ ಪೂವಪ್ಪ ಶೆಟ್ಟಿ ಅಳಿಕೆ, ಪ್ರಧಾನ ಸಂಚಾಲಕರಾಗಿ ರಾಧಕೃಷ್ಣ ಶೆಟ್ಟಿ ಚೆಲ್ಲಡ್ಕ ಅವರನ್ನು ನೇಮಕಗೊಳಿಸಲಾಯಿತು.

7899

ಈ ವೇಳೆ ವಿಟ್ಲ ಘಟಕದ ಉದ್ಘಾಟನಾ ಸಮಾರಂಭ ಮಾ. 24ಕ್ಕೆ ನಿಗದಿಪಡಿಸಲಾಯಿತು.

By suddi9

Leave a Reply

Your email address will not be published. Required fields are marked *