ಬಂಟ್ವಾಳ: ಸಹಕಾರ ಭಾರತಿ ಬಂಟ್ವಾಳ ಇವರ ವತಿಯಿಂದ ಸಹಕಾರ ಭಾರತಿ ಸಂಸ್ಥಾಪಕರಾದ ಶ್ರೀ ಲಕ್ಷ ಣ್ ರಾವ್ ಇನಾಂದರ್ ರವರ ಜನ್ಮ ಶತಾಬ್ದಿ ನಿಮಿತ್ತ ಶತಾಬ್ದಿ ಸಹಕಾರಿ ಸಮಾವೇಶ ಜ.30 ರಂದು ಬೆಳಿಗ್ಗೆ ಸ್ಪರ್ಶ ಕಲಾ ಮಂದಿರ ಬಿ.ಸಿ.ರೊಡಿನಲ್ಲಿ ನಡೆಯಲಿದೆ ಎಂದು ಸಮಿತಿಯ ಸಂಚಾಲಕ ಟಿ.ಜೆ.ರಾಜಾರಾಮ್ ಭಟ್ ಅವರು ಹೇಳಿದರು.

ಅವರು ಬಿಸಿರೊಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಂಪರ್ಕ , ಸೇವೆ ಮತ್ತು ಸಮರ್ಪಣೆ ಎಂಬ ಅಧಾರದಲ್ಲಿ ದೇಶದ ಸಹಕಾರ ಕ್ಷೇತ್ರದ ಅರ್ಥ ವ್ಯವಸ್ಥೆ ಹಾಗೂ ಸಾಮಾಜಿಕ ಸಬಲೀಕರಣಕ್ಕೆ ಗುಣಾತ್ಮಕ ದ್ರಷ್ಟಿಕೋನ ನೀಡುವ ಕಾಯಕವನ್ನು ಸಹಕಾರಿ ಭಾರತಿ ನಿರ್ವಹಿಸಿಕೊಂಡು ಬಂದಿದೆ.

ಈ ಸಮಾವೇಶದಲ್ಲಿ ಸಹಕಾರ ಸಂಸ್ಥೆ ಗಳಿಗೆ ಆದಾಯ ತೆರಿಗೆ ಯ ಸವಾಲುಗಳು ಹಾಗೂ ಸಹಕಾರ ಕಾಯ್ದೆ ತಿದ್ದುಪಡಿ ಹಾಗೂ ತಿದ್ದುಪಡಿ ಹಾಗೂ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಿದರು.

By suddi9

Leave a Reply

Your email address will not be published. Required fields are marked *