ಬಂಟ್ವಾಳ: ಕಾಂಗ್ರೆಸ್‍ನಂತೆ ಬರೀ ಟಾಟಾ ಮಾಡಿ ಗೆಲ್ಲಲು ಸಾಧ್ಯವಿಲ್ಲ, ಜೆಡಿಎಸ್‍ನಂತೆ ಜಾತಿ ರಾಜಕಾರಣ ಮಾಡಿ ಗೆಲ್ಲಲು ಸಾಧ್ಯವಿಲ್ಲ. ಬಿಜೆಪಿ ಗೆಲ್ಲಬೇಕಾದರೆ ಪ್ರತಿಯೊಬ್ಬ ಕಾರ್ಯಕರ್ತನೂ ದುಡಿಯಬೇಕು, ಪಕ್ಷಕ್ಕಾಗಿ ಪರಿಶ್ರಮ ಪಡಬೇಕು ಎಂದು ಬಿಜೆಪಿ ರಾಜ್ಯ ನಾಯಕಿ ತೇಜಸ್ವಿನಿ ಗೌಡ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.7

ಬಿಜೆಪಿ ಮುಖಂಡ ರಾಜೇಶ್ ನಾೈಕ್ ಉಳಿಪಾಡಿಗುತ್ತು ನೇತೃತ್ವದಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ವತಿಯಿಂದ 13 ದಿನಗಳ ಕಾಲ 59 ಗ್ರಾಮ ವ್ಯಾಪ್ತಿಯಲ್ಲಿ ನಡೆದ ಪರಿವರ್ತನೆಗೆ ನಮ್ಮ ನಡಿಗೆ, ಬಂಟ್ವಾಳದ ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆ ಕಾಲ್ನಡಿಗೆ ಜಾಥದ ಸಮಾರೋಪ ಸಮಾರಂಭ ಶುಕ್ರವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆದಿದ್ದು ಅವರು ಪ್ರಧಾನ ಭಾಷಣ ಮಾಡಿದರು.

ಅನ್ನ ಭಾಗ್ಯಕ್ಕೆ 3 ರೂ. ಕೊಟ್ಟ ಸಿದ್ದರಾಮಯ್ಯನವರ ಪೊಟೋ ಮೂಟೆ ಮೇಲೆ ಇರುತ್ತದೆ, 27 ರೂ. ಕೊಟ್ಟ ಪ್ರಧಾನಿ ನರೇಂದ್ರ ಮೋದಿಯವರ ಪೊಟೋ ಎಲ್ಲೂ ಇಲ್ಲ. ಬಿಜೆಪಿಯ ಬೆಳಕು ಕಾಂಗ್ರೆಸಿದ್ದು ಬರೀ ತಳುಕು ಎಂದು ಲೇವಡಿ ಮಾಡಿದರು.

ಅರಣ್ಯ ಸಚಿವ ಬಿ.ರಮಾನಾಥ ರೈ ವಿರುದ್ದ ಕಿಡಿಕಾರಿದ ತೇಜಸ್ವಿನಿ ಗೌಡ, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಗ್ರಾನೈಟ್ ವ್ಯವಾಹರಕ್ಕೆ ಅರಣ್ಯವನ್ನೇ ಲೂಟಿ ಮಾಡಿ ಬಡವರಿಗೆ ಅನ್ಯಾಯ ಮಾಡುತ್ತಿದ್ದಾಗ ಅರಣ್ಯ ಸಚಿವರಾಗಿ ಎಲ್ಲಿ ಮಲಗಿದ್ದಿರಿ? 6 ಬಾರಿ ಶಾಸಕನಾಗಿರುವುದೇ ನಿಮ್ಮ ಸಾಧನೆಯಾಗಿದ್ದರೆ 59 ಗ್ರಾಮಗಳಲ್ಲಿ ಪಾದಯಾತ್ರೆ ಮಾಡುವಾಗ ಜನರು ಕಣ್ಣೀರು ಹಾಕುವಂತಹ ಸ್ಥಿತಿ ಇನ್ನೂ ಯಾಕೆ ಇದೆ ಎಂದು ಪ್ರಶ್ನಿಸಿದ ಅವರು ರಾಜಕಾರಣಿಗಳು ಟಯರ್ಡ್ ಆಗುವುದಿಲ್ಲ ಅವರನ್ನು ಜನರೇ ರಿಟೈರ್ಡ್ ಮಾಡುತ್ತಾರೆ ಎಂದು ಟಾಂಗ್ ನೀಡಿದರು.

ಕಳೆದ ಚುನಾವಣೆಯಲ್ಲಿ ರಾಜೇಶ್ ನಾೈಕ್ ಅವರಿಗೆ ಮತದಾರನ ಆಶೀರ್ವಾದ ಕಡಿಮೆಯಾಗಿರಲಿಲ್ಲ, ಗೆಲ್ಲುವ ತಯಾರಿ ಕಡಿಮೆ ಇತ್ತು. ಆದರೂ ತಾನು ಸೋತಿದ್ದೇನೆಂದು ಸುಮ್ಮನಿರದೇ ಪಕ್ಷ ಸಂಘಟನೆ ಮಾಡಿರುವುದು ಶ್ಲಾಘನೀಯ ಎಂದರು.

ನಡೆಯುವಾಗ ಎಡವುದು ಸಹಜ, ಎಲ್ಲರಿಗೂ ತಮ್ಮ ತಪ್ಪಿನ ಅರಿವಾಗಿದೆ. ಜಾತಿ, ಕುಲ ಎನ್ನುತ್ತಾ ಹೋದರೆ ಪಕ್ಷ ಅನಾಥವಾಗುತ್ತದೆ ಎಂದ ಅವರು ಈ ಪುಣ್ಯ ಭೂಮಿಯಲ್ಲಿ ಹುಟ್ಟಿ ಹತರಾದ 23 ಮಂದಿ ಹಿಂದೂ ಕಾರ್ಯಕರ್ತರ ನೆತ್ತರು ವ್ಯರ್ಥವಾಗಲು ಬಿಡುವುದಿಲ್ಲ, ಕಾಂಗ್ರೆಸ್‍ನ ತಲವಾರು, ಗುಂಡುಗಳಿಗೆ ಬಿಜೆಪಿ ಕಾರ್ಯಕರ್ತರನ್ನು ತಡೆಯುವ ಶಕ್ತಿ ಇಲ್ಲ, ಮುಂದೆ ಬ್ಯಾಲೆಟ್ ಬಾಕ್ಸ್‍ನಲ್ಲಿ ಸರಿಯಾದ ಉತ್ತರ ನೀಡುತ್ತೇವೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಅಭಿವೃದ್ದಿ ಹಾಗೂ ವಿಕಾಸ ಬಿಜೆಪಿಯ ಜೋಳಿಗೆಯಲಿದ್ದರೆ ರಮನಾಥ ರೈ ಜೋಳಿಗೆಯಲ್ಲಿ ಕತ್ತರಿ ಹಾಗೂ ತೆಂಗಿನ ಕಾಯಿ ಮಾತ್ರ ಇದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಹಿಂದೂ ಮುಸ್ಲಿಮರನ್ನು ವಿಭಜಿಸಿ ಪಾಕಿಸ್ತಾನ ಸೃಷ್ಟಿಸಿದ ಮಹಮ್ಮದಾಲಿ ಜಿನ್ನನಂತೆ ಇಂದು ಹಿಂದೂ ಮುಸ್ಲಿಮರನ್ನು ಪ್ರತ್ಯೇಕಿಸಲು ಮರಿ ಮಹಮ್ಮದಾಲಿ ಜಿನ್ನನಾಗಿ ರಮಾನಾಥ ರೈ ಹುಟ್ಟಿಕೊಂಡಿದ್ದಾರೆ ಎಂದು ಟೀಕಿಸಿದರು.

ಸುಳ್ಳನ್ನೇ ಅಸ್ತ್ರ ಮಾಡಿಕೊಂಡಿರುವ ರಮಾನಾಥ ರೈ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಶಾಸಕ ಪದ್ಮನಾಭ ಕೊಟ್ಟರಿ ಮಂಜೂರು ಮಾಡಿದ ಯೋಜನೆಗಳಿಗೂ ತೆಂಗಿನ ಕಾಯಿ ಹೊಡೆಯುತ್ತಾರೆ ಎಂದು ತೀಕ್ಷಣವಾಗಿ ಪ್ರತಿಕ್ರಿಯಿಸಿದರು. ಹೊೈಗೆ ವ್ಯಾಪಾರ ಮಾಡುವ ರಮನಾಥ ರೈವರಿಗೆ ರಾಜಕೀಯ ಬೇಡ ಎಂದ ಅವರು ನನ್ನ ಬಹುತೇಕ ಸ್ನೇಹಿತರು ಬಂಟರೇ, ಬಿಜೆಪಿಯಲ್ಲಿಯೂ ನಾನು ಬಂಟನಿಗೆ ಮತ ಕೊಡಿ ಎಂದು ಕೇಳುತ್ತಿದ್ದೇನೆ ಇನ್ನು ಕಾಂಗ್ರೆಸ್‍ನವರ ನಾನು ಬಂಟ ವಿರೋದಿ ಎನ್ನುವ ಹೇಳಿಕೆ ಅರ್ಥ ಹೀನ ಎಂದರು.

ಪಾದಯಾತ್ರೆಯ ರುವಾರಿ ರಾಜೇಶ್‍ನಾೈಕ್ ಉಳಿಪಾಡಿಗುತ್ತು ಮಾತನಾಡಿ ಸಾಕಷ್ಟು ಅನುಭವಗಳು ಈ ಯಾತ್ರೆಯ ಮೂಲಕ ಸಿಕ್ಕಿದೆ. ಜನರ ಕಷ್ಟ ಸುಖಗಳನ್ನು ಅರಿತುಕೊಳ್ಳಲು ಈ ಯಾತ್ರೆಯಿಂದ ಸಾಧ್ಯವಾಗಿದೆ ಎಂದರು. ಬಂಟ್ವಾಳದಲ್ಲಿ ಪರಿವರ್ತನೆಯ ಖಂಡಿತವಾಗಿಯೂ ಬೇಕಾಗಿದೆ. ಈ ಪರಿವರ್ತನೆ ಸಾಕಾರಗೊಂಡರೆ ಮುಂದಿನ ದಿನದಲ್ಲಿ ಕನಸಿನ ಬಂಟ್ವಾಳ ರೂಪುಗೊಳ್ಳಲು ಸಾಧ್ಯವಿದೆ. ನಾನು ಅಪೇಕ್ಷೇ ಪಟ್ಟಿದ್ದಕ್ಕಿಂತಲೂ ಹೆಚ್ಚಿನ ಸಹಕಾರ ಕಾರ್ಯಕರ್ತರು ಯಾತ್ರೆಯಲ್ಲಿ ನೀಡಿದ್ದಾರೆ ಎಂದ ಅವರು ಪಾದಯಾತ್ರೆಯ ಯಶಸ್ಸಿಗೆ ಸಹಕರಿಸಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಬಿಜೆಪಿ ಹಿಂದುಳಿದ ವರ್ಗರಾಜ್ಯ ಘಟಕದ ಕಾರ್ಯದರ್ಶಿ ಸತ್ಯಜೀತ್ ಸುರತ್ಕಲ್ ಮಾತನಾಡಿ ರಾಜ್ಯದಲ್ಲಿ ಹಿಂದೂ ಯವಕರ ‘ಹತ್ಯಾಭಾಗ್ಯ’ ದ ರಾಜಕಾರಣಕ್ಕೆ ಮುಕ್ತಿ ನೀಡಲು ಬದಲಾವಣೆ ಅಗತ್ಯವಾಗಿದ್ದು, ಕಾಂಗ್ರಸ್ ನ್ನು ತೊಲಗಿಸಿ,ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದರು. ಕಳ್ಳಿಗೆ ಗ್ರಾ.ಪಂ.ಉಪಾಧ್ಯಕ್ಷ ಪುರುಷ ಎನ್.ಸಾಲಿಯಾನ್ ಮಾತನಾಡಿ,ಈ ಬಾರಿಯ ಚುನಾವಣೆ ಬಂಟ್ವಾಳ ಕ್ಷೇತ್ರದಲ್ಲಿ ಧರ್ಮ-ಅಧರ್ಮದ ನಡುವಿನಸ್ಪರ್ಧೆಯಾಗಲಿದ್ದು,ಬಂಟ್ವಾಳದಲ್ಲಿ ಬಿಜೆಪಿ ಅಶ್ವಮೇಧದ ಕುದುರೆಯನ್ನು ಈಗಾಗಲೇ ಬಿಡಲಾಗಿದ್ದು,ತಾಕತ್ತಿದ್ದರೆ ಕಾಂಗ್ರೆಸ್ ತಡೆಯಲಿ ಸಚಿವರೈ ಗೆ ಸೋಲು ಖಚಿತ ಎಂದರು. ಮಾಜಿ ಸಚಿವ ನಾಗರಾಜ ಶೆಟ್ಟಿ ಮಾತನಾಡಿ ಬಂಟ್ವಾಳದಲ್ಲಿ ಸಚಿವರ ಹೋಮ, ಚಮತ್ಕಾರಗಳು ಯಾವುದು ಕೂಡ ಈ ಬಾರಿಯ ಚುನಾವಣೆಯಲ್ಲಿ ನಡೆಯದು, ಪರಿವರ್ತನೆಯ ಗಾಳಿ ಬೀಸುತ್ತಿದ್ದು,ಯುವ ಕಾರ್ಯಕರ್ತರು ಸೆಟೆದು ನಿಂತಿದ್ದಾರೆ, 2008ರ ಫಲಿತಾಂಶ ಮರುಕಳಿಸಲಿದೆ ಎಂದರು.

ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಮಾತನಾಡಿ ಕೊಲ್ಲೂರು ಕ್ಷೇತ್ರದಿಂದ ಕಲ್ಲಡ್ಕ ,ಪುಣಚ ಶಾಲೆಯ ಮಕ್ಕಳಿಗೆ ಪೂರೈಕೆಯಾಗುತ್ತಿದ್ದ ಅನ್ನ ದಾಸೋಹಕ್ಕೆ ಕಲ್ಲು ಹಾಕಿದ ಸಚಿವರಿಗೆ ಮಕ್ಕಳ ಶಾಪ ತಟ್ಟಲಿದೆ ಎಂದರು.ಸಭಾಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳ ಗೆಲುವು ಶತಸಿದ್ದ, ಇದಕ್ಕೆ ಪೂರಕವಾಗಿ ದ.ಕ.ಜಿಲ್ಲೆಯಲ್ಲಿಯು 8 ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದರು.

ಮಾಜಿ ಶಾಸಕ ರುಕ್ಮಯ ಪೂಜಾರಿ,ರಾಜ್ಯ ಬಿಜೆಪಿ ಸಹ ವಕ್ತಾರೆ ಸುಲೋಚನ ಜಿ.ಕೆ.ಭಟ್, ಜಿಲ್ಲಾ ಪ್ರ.ಕಾರ್ಯದರ್ಶಿಗಳಾದ ಉಮಾನಾಥ ಕೋಟ್ಯಾನ್,ಕ್ಯಾ.ಬ್ರಿಜೇಶ್ ಚೌಟ,ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ,ಜಿಪಂ ಸದಸ್ಯರಾದ ತುಂಗಪ್ಪ ಬಂಗೇರ,ಕಮಾಲಾಕ್ಷಿ ಪೂಜಾರಿ,ಜಿಲ್ಲಾ ಎಸ್. ಸಿ.ಮೋರ್ಛಾದ ಅಧ್ಯಕ್ಷ ದಿನೇಶ್ ಅಮ್ಟೂರು, ಮಂಗಳೂರು ಕ್ಷೇತ್ರದ ಅಧ್ಯಕ್ಷ ಸಂತೋಷ ಕುಮಾರ್ ರೈ ಬೋಳಿಯಾರ್, ಕ್ಷೇತ್ರದ ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ,ಪ್ರಮುಖರಾದ ಪ್ರದೀಪ್ ಕುಮಾರ್ ಶೆಟ್ಟಿ ಅಡ್ಯಾರ್,ವಜ್ರನಾಥ ಕಲ್ಲಡ್ಕ, ವಸಂತ ಅಣ್ಣಳಿಕೆ, ತನಿಯಪ್ಪ ಗೌಡ,ಗಂಗಾಧರ ಕೋಟ್ಯಾನ್, ದಿನೇಶ್ಭಂಡಾರಿ,ಯಶೋಧ.ಬಿ.,ಸುಗುಣ ಕಿಣಿ, ಸಂಧ್ಯಾ ವೆಂಕಟೇಶ್,ನಳಿನಿ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿದ್ದರು.ಕ್ಷೇತ್ರದ ಅಧ್ಯಕ್ಷ ದೇವದಾಸ ಶೆಟ್ಟಿ ಪ್ರಸ್ತಾವಿಸಿ,ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಮೋನಪ್ಪ ದೇವಸ್ಯ ವಂದಿಸಿದರು.ಉಪಾಧ್ಯಕ್ಷ ದೇವಪ್ಪ ಪೂಜಾರಿ ನಿರೂಪಿಸಿದರು.

273 ಕಿ.ಮೀ.ನಡಿಗೆ: ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತುಅವರ ನೇತ್ರತ್ವದ ಪಾದಯಾತ್ರೆಯು ಶುಕ್ರವಾರ ಬೆಳಿಗ್ಗೆ ಅಮ್ಟಾಡಿಯಿಂದ ಹೊರಟು ಬಂಟ್ವಾಳ ಬೈಪಾಸ್,ಜಕ್ರಿಬೆಟ್ಟು,ನಗರದ ಮೂಲಕ ನೆರೆವಿಮೋಚನೆ ರಸ್ತೆ ಮೂಲಕ ಬಿ.ಸಿ.ರೋಡಿಗೆ ತೆರಳಿ ಅಲ್ಲಿಂದ ವಾಪಾಸ್ಸಾಗಿ ಸಮಾರೋಪ ಸಮಾರಂಭದ ಕಲಾಮಂದಿರದಲ್ಲಿ ಸಂಪನ್ನಗೊಂಡಿತ್ತು.ಗೊಂಬೆ ಕುಣಿತ,ಚೆಂಡೆ ಪಾದಯಾತ್ರೆಗೆ ವಿಶೇಷ ಮೆರಗು ನೀಡಿತು.ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು,ಪಕ್ಷದ ಮುಖಂಡರು,ಹಿರಿಯರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ಜ.14 ರಂದು ರಾಯಿ ಗರುಡ ಮಹಾಂಕಾಳಿ ದೇವಳದ ವಠಾರದಿಂದ ಆರಂಭಗೊಂಡ ಪಾದಯಾತ್ರೆ 13 ದಿನಗಳ ಕಾಲ ಬಂಟ್ವಾಳ ಕ್ಷೇತ್ರದ 59 ಗ್ರಾಮಗಳಲ್ಲಿ ಸುಮಾರು 273 ಕಿಮೀ.ನಷ್ಟ ಕ್ರಮಿಸಿದೆ. ರಾಜೇಶ್ ನಾಯ್ಕ್ ಅವರು ಈ ಸಂದರ್ಭ ಗ್ರಾಮ ವಾಸ್ತವ್ಯದ ಮೂಲಕ ಜನರ ಆಹವಾಲುಗಳನ್ನು ಅಲಿಸಿದರು.ಇವರ ಪಾದಯಾತ್ರೆ ಕಾರ್ಯಕರ್ತರಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ.

By suddi9

Leave a Reply

Your email address will not be published. Required fields are marked *