ಮಂಗಳೂರು: ಉರ್ವ ಪೊಲೀಸರು ಆ. 14 ರಂದು ನಾಲ್ವರು ವಾಹನ ಕಳವು ಆರೋಪಿಗಳನ್ನು ಬಂಧಿಸಿ ಅವರಿಂದ ಮೂರು ಬೈಕ್ಗಳನ್ನು ವಶ ಪಡಿಸಿಕೊಂಡಿದ್ದಾರೆ.
ಬಿಜೈ ನ್ಯೂರೋಡ್ನ ಪ್ರತೀಕ್ (19), ಕಾರ್ಸ್ಟಿÅàಟ್ನ ರಕ್ಷಿತ್ (19), ಪಿವಿಎಸ್ ಕಲಾಕುಂಜ ಬಳಿಯ ಶಿಶಿರ್ (19) ಮತ್ತು ಸಕಲೇಶಪುರದ ಕಾರ್ತಿಕ್ (19) ಬಂಧಿತರು.

ಗುರುವಾರ ಬೆಳಗ್ಗೆ ಕೊಟ್ಟಾರದ ಇನ್ಫೋಸಿಸ್ ಹಿಂಬದಿಯ ರಸ್ತೆಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ನಂಬರ್ ಪ್ಲೇಟ್ ಇಲ್ಲದ ಮೋಟಾರ್ ಬೈಕ್ನ್ನು ಒಬ್ಬ ವ್ಯಕ್ತಿ ಚಲಾಯಿಸಿ ಕೊಂಡು ಬಂದಿದ್ದು, ತಡೆದು ನಿಲ್ಲಿಸಿ ವಿಚಾರಿಸಿದಾಗ ಯಾವುದೇ ದಾಖಲೆ ಪತ್ರಗಳು ಬೈಕ್ ಸವಾರನ ಬಳಿ ಇರಲಿಲ್ಲ. ಆತನನ್ನು ಠಾಣೆಗೆ ಕರೆದೊಯ್ದು ಕೂಲಂಕುಶವಾಗಿ ತನಿಖೆ ನಡೆಸಿದಾಗ ಆತನ ಬಳಿ ಇದ್ದ ಬೈಕ್ ಹೊಗೆಬೈಲ್ನಿಂದ ಕಳವು ಮಾಡಿದ್ದೆಂದು ಒಪ್ಪಿಕೊಂಡ. ಕಾಪಿಕಾಡ್ ಮತ್ತು ಯೆಯ್ನಾಡಿಗಳಿಂದಲೂ ಬೈಕ್ ಕದ್ದಿರುವುದಾಗಿ ಮತ್ತು ಹ್ಯಾಟ್ಹಿಲ್ನಿಂದ ಒಂದು ಆಲ್ಟೊ ಕಾರು ಕಳವು ಮಾಡಿರುವುದಾಗಿ ತಿಳಿಸಿದ್ದಾನೆ. ಮಾತ್ರವಲ್ಲದೆ ತನ್ನ ಸಹಚರರಾದ ರಕ್ಷಿತ್, ಕಾರ್ತಿಕ್ ಮತ್ತು ಶಿಶಿರ್ ಅವರ ಹೆಸರನ್ನೂ ತಿಳಿಸಿದ್ದಾನೆ.
ಬಳಿಕ ಎಲ್ಲಾ ಆರೋಪಿಗಳನ್ನು ಬಂಧಿಸಿ ಅವರಿಂದ ಒಟ್ಟು ಮೂರು ಬೈಕ್ಗಳನ್ನು ಪೊಲೀಸರು ವಶ ಪಡಿಸಿಕೊಂಡರು. ಕಳವು ಮಾಡಿದ್ದ ಆಲ್ಟೋ ಕಾರು ಇನ್ನಷ್ಟೇ ಪತ್ತೆಯಾಗ ಬೇಕಾಗಿದೆ.
ಆರೋಪಿಗಳು ರಾತ್ರಿ ವೇಳೆ ರೌಂಡ್ಸ್ ಹೋಗಿ ಕಳ್ಳತನಕ್ಕೆ ಹೊಂಚು ಹಾಕಿ ಅವಕಾಶ ಸಿಕ್ಕಿದಾಗಲೆಲ್ಲಾ ಕಳವು ಮಾಡುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಹಿಂದೆ ಸಣ್ಣ ಪುಟ್ಟ ಗೂಡಂಗಡಿ, ಜ್ಯೂಸ್ ಅಂಗಡಿಗಳಲ್ಲಿ ಕಳ್ಳತನ ಮಾಡಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಉರ್ವ ಠಾಣೆಯ ಪಿಎಸ್ಐಗಳಾದ ಎಚ್.ಎಂ.ಪೂವಪ್ಪ ಮತ್ತು ವಿಶಾಲಾಕ್ಷಿ, ಸಿಬಂದಿ ಮನೋಹರ್, ಓಂದಾಸ್, ಸಂತೋಷ್ ಸಸಿಹಿತ್ಲು, ಕಾಂತರಾಜ್, ಸಂತೋಷ್ ಅವರು ಭಾಗವಹಿಸಿದ್ದರು.



