ಗುರುಪುರ: ಕುಲಶೇಖರ-ಮೂಡಬಿದಿರೆ ಹೆದ್ದಾರಿ ಗುರುಪುರ ಸೇತುವೆಗೆ ಉನ್ನತ ಅಧಿಕಾರಿಗಳ ತಮಡವೊಂದು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಧಾರಣಾ ಸಾಮಥ್ರ್ಯದ ಬಗ್ಗೆ ಸಮೀಕ್ಷೆ ನಡೆಸಿತು.
ಬೆಂಗಳೂರಿನ ಹೆಚ್ಚುವರಿ ಮೇಲ್ಮನವಿ (ಟ್ರಬ್ಯೂಲನ್) ಪ್ರಾಧಿಕಾರದ ಆದೇಶದಂತೆ ಆಯೋಗದ ಮುಖ್ಯಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಯಶವಂತ, ಹಿರಿಯ ನಿರೀಕ್ಷಕ ಚರಣ್ ಗುರುಪುರ ಸೇತುವೆಯ ಧಾರಣಾ ಸಾಮಥ್ರ್ಯ, ರಸ್ತೆ ಸ್ಥಿತಿ ಹಾಘೂ ಹೆಚ್ಚುವರಿ ಸಾಧ್ಯತೆ ಬಗ್ಗೆ ಸಮೀಕ್ಷೆ ನಡೆಸಿದರು.
ಟ್ರಬ್ಯೂಲನ್ ನಿರ್ದೇಶನದಂತೆ ಈ ಆಯೋಗವು ಜ.20ರಂದು ತನ್ನ ವರದಿ ಸಲ್ಲಿಸಲಿದೆ ಎಂದು ಕೆಎಸ್ಸಾರ್ಟಿಸಿ ಪರವಾದಿ ವಕೀಲ ಎಂ.ಎನ್ .ನಾಗೇಶ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಮುಖಂಡರಾದ ಸುಧಾಕರ ಪೂಂಜ, ಸುದರ್ಶನ ಶೆಟ್ಟಿ, ತಾ.ಪಂ. ಸದಸ್ಯ ಸಚಿನ್ ಅಡಪ, ಯಶವಂತ ಆಳ್ವ ಮತ್ತಿತರರು ಇದ್ದರು.

