ಅಡ್ಡೂರು: ಅಡ್ಡೂರು ಯೂತ್ ಕಾಂಗ್ರಸ್ ವತಿಯಿಂದ ಜ.20ರಂದು ಹೊನಲು ಬೆಳಕಿನ “ಪ್ರೋ ಕಬಡ್ಡಿ ಲೀಗ್ ಪಂದ್ಯಾಟ” ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಹಿಂಬದಿಯಲ್ಲಿ ಆಯೋಜಿಸಲಾಗಿದೆ.
ಇಂದು ಸಂಜೆ 4ಕ್ಕೆ ನಡೆಯಲಿರುವ ಪಂದ್ಯಾ ಕೂಟದಲ್ಲಿ 12 ತಂಡಗಳು ಭಾಗವಹಿಸಲಿದ್ದು, ವಿಜೇತ ಪ್ರಥಮ ತಂಡಕ್ಕೆ 20,018, ದ್ವಿತೀಯ ತಂಡಕ್ಕೆ 14,014 ರೂ. ನಗದು ಬಹುಮಾನ ಹಾಗೂ ಯೂತ್ ಕಾಂಗ್ರೆಸ್ ಟ್ರೋಫಿ ನೀಡಿ ಗೌರವಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ 8792099202, 8792247746, 9164238641 ಹಾಗೂ 8123855705 ದೂ.ಸಂಖ್ಯೆಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

