12010

ಉಡುಪಿ: ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ಬರಬೇಕು. ಇದಕ್ಕಾಗಿ ನೂತನ ಪರ್ಯಾಯ ಪೀಠ ಅಲಂಕರಿಸಿದ ಪಲಿಮಾರು ಸ್ವಾಮೀಜಿ ಸಂಕಲ್ಪ ತೊಟ್ಟಿದ್ದಾರೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ತಿಳಿಸಿದ್ದಾರೆ.

ನಗರದ ಪಲಿಮಾರು ಪರ್ಯಾಯದ ಎರಡು ವರ್ಷದ ಜ್ಞಾನಯಜ್ಞ ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ದೇಶವನ್ನು ಇಲ್ಲಿನ ರಾಜಮಹಾರಾಜರು ಕಟ್ಟಿಲ್ಲ. ಬ್ರಿಟಿಷ್ ಮನಸ್ಥಿತಿಯುಳ್ಳ ಇತಿಹಾಸಕಾರರು ದೇಶದ ಬಗ್ಗೆ ಸುಳ್ಳನ್ನು ಬರೆದಿದ್ದಾರೆ ಎಂದು ಆರೋಪಿಸಿದ ಅವರು, ಕಾವಿ ತೊಟ್ಟವರು ಹಾಕಿದ ಸನ್ಮಾರ್ಗದಲ್ಲಿ ನಾವು ಬೆಳೆಯಬೇಕು ಎಂದು ಕರೆ ನೀಡಿದರು.

 

By suddi9

Leave a Reply

Your email address will not be published. Required fields are marked *