ಬಿಸಿರೋಡು: ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಪವನ್ ಕಿರಣಕೆರೆ ವಿರಚಿತ “ಅಹಂ ಬ್ರಹ್ಮಾಸ್ಮಿ” ಎಂಬ ಯಕ್ಷಗಾನ ಬಯಲಾಟವು ಜ. 7ರಂದು ಭಾನುವಾರ ಬಿ.ಸಿ.ರೋಡು ಸ್ಪರ್ಶ ಕಲಾ ಮಂದಿರ ಜೋಡುಮಾರ್ಗ ಉದ್ಯಾನವನದ ಹತ್ತಿರ ಜರುಗಲಿದೆ
* ಸಭಾಕಾರ್ಯಕ್ರಮ *
ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಖ್ಯಾತ  ನೋಟರಿ ವಕೀಲರಾದ  ಅಶ್ವಿನಿ ಕುಮಾರ್ ರೈ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಮಂಗಳೂರಿನ ಉದ್ಯಮಿ ಸಚ್ಚಿದಾನಂದ ಶೆಟ್ಟಿ ಬೊಂಡಾಲ  , ಬಿ.ಸಿ.ರೋಡು ವರ್ತಕರ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಸ್ ಜೈನ್, ನರಿಕೊಂಬು ಗ್ರಾಮ ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು ಭಾಗವಹಿಸಲಿದ್ದಾರೆ.
* ಸನ್ಮಾನ *
ಹಿಮ್ಮೇಳ ಚೆಂಡೆ-ಮದ್ದಳೆ ವಾದಕರಾದ ಮೂರ್ಜೆ ವೆಂಕಟೇಶ್ ಶೆಟ್ಟಿ ಇವರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಗುವುದು.
ಅಧ್ಯಕ್ಷರಾದ ನಾರಾಯಣ ಸಿ. ಪೆರ್ನೆ, ಗೌರವಾಧ್ಯಕ್ಷ ಬಿ. ಶೇಷಪ್ಪ ಮಾಸ್ಟರ್, ಪ್ರ. ಕಾರ್ಯದರ್ಶಿ ನೇಸರ ವಳವೂರು, ಉಪಾಧ್ಯಕ್ಷರಾದ ರಮೇಶ್ ಕೆ., ತಿಮ್ಮಪ್ಪ ಕೆ. ಕೋಶಾಧಿಕಾರಿ ಸಧಾನಂದ ಎಂ ಶೆಟ್ಟಿ, ಜಯರಾಂ ಎನ್, ದಿವಾಕರ ದಾಸ್ ಕಾವಳ ಕಟ್ಟೆ, ಉಮೇಶ್ ಆರ್ ಮೂಲ್ಯ,  ತಿಲಕ್ ರಾಜ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿರುವರು  ಎಂದು ತುಡರ್ ಯಕ್ಷ ಮಿತ್ರೆರ್ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *