ರಿಪ್ಪನ್ ಪೇಟೆ: ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರು ದಾರುಣ ಘಟನೆ ಪಟ್ಟ ಣದಲ್ಲಿ ಸೋಮವಾರ ನಡೆದಿದೆ.
ವಾಣಿ (35) ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ಗುರುತಿಸಲಾಗಿದೆ.
ಇಲ್ಲಿನ ಹೈಸ್ಕೂಲ್ ಎದುರು ವಾಸವಿದ್ದ ರಾಘವೇಂದ್ರ ಅವರ ಪತ್ನಿ ವಾಣಿ ಅವರಿಗೆ ಎರಡು ಗಂಡು ಒಂದು ಹೆಣ್ಣುಮಗುವಿದೆ ಎಂದು ತಿಳಿದು ಬಂದಿದೆ.
ಇನ್ನೂ ಈ ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಈ ಬಗ್ಗೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

