ಮಂಗಳೂರು: ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ಮಾಡಿದ್ದು ತಪ್ಪು ಎಂದು ಬ್ರಿಟೀಷರಿಗೆ ಜೈಲಿನಲ್ಲಿಯೇ ಮುಚ್ಚಳಿಕೆ ಬರೆದುಕೊಟ್ಟ ಸಾವರ್ಕರ್ ವಂಶಸ್ಥರು ಬಿಜೆಪಿಗರು ಎಂದು ಸಿಪಿಐ ಹಿರಿಯ ಮುಖಂಡ ಡಾ.ಸಿದ್ದನಗೌಡ ಪಾಟೀಲ ಸಚಿವ ಅನಂತ ಕುಮಾರ್ ಹೆಗಡೆಗೆ ತಿರುಗೇಟು ನೀಡಿದ್ದಾರೆ.
ಮಂಗಳವಾರ ನಗರದ ನೆಹರೂ ಮೈದಾನದಲ್ಲಿ ಸಿಪಿಐವತಿಯಿಂದ ಆಯೋಜಿಸಿದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಘಟಕದ ಬಹಿರಂಗ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ರಕ್ತದ ಗುರುತು ಕೇಳುತ್ತಿರುವ ಕೇಂದ್ರ ಅನಂತಕುಮಾರ್ ಹೆಗ್ಡೆಯವರೇ ಜಾತ್ಯತೀತರ ತಂದೆ ಭಗತ್ ಸಿಂಗ್. ಆದರೆ ಜಾತ್ಯಾತೀತರನ್ನು ಪ್ರಶ್ನಿಸುವ ನಿಮ್ಮ ತಂದೆ ನಾಥೂರಾಮ್ ಗೋಡ್ಸೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

