ಬಂಟ್ವಾಳ: ತಾಲೂಕಿನ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಶ್ರೀ ಮಹಾಗಣಪತಿ ದೇವರ ಗರ್ಭಗುಡಿ ಹಾಗೂ ಶ್ರೀಭದ್ರಕಾಳಿ ದೇವಿಯ ಗರ್ಭಗುಡಿಯ ದಾರಂದ ಕಾಮಗಾರಿಗೆ ಕುಲಾಲ ಸೇವಾ ಸಂಘದ ವತಿಯಿಂದ ಸಂಗ್ರಹಿಸಿದ 1,60,465 ರೂ. ಅನ್ನು ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಸುಂದರ್ ಬಿ.ಬಂಗೇರಾ ಅವರಿಗೆ ಮಂಗಳವಾರ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿ ಕೋಶಾಧಿಕಾರಿ ರಾಘವ ಮಣೇಲ್, ಜತೆ ಕಾರ್ಯದರ್ಶಿ ಭಾರತಿ ಸೇಸಪ್ಪಾ, ತುಂಬೆ ಕುಲಾಲ ಸೇವಾ ಸಂಘದ ಅಧ್ಯಕ್ಷ ಲಿಂಗಪ್ಪ ಕುಲಾಲ್, ಗೌರವಾಧ್ಯಕ್ಷ ನೀಲಪ್ಪ ಸಾಲ್ಯಾನ್, ಕೋಶಾಧಿಕಾರಿ ಹರೀಶ್ ಪೆರ್ಲಬೈಲು, ಉಪಾಧ್ಯಕ್ಷ ರಾಧಾ, ಅಶೋಕ್ ಕುಲಾಲ್, ಗೋಪಾಲ್ , ಸಂದೀಪ್ ಬೊಳ್ಳಾರಿ, ವಿಜಯ ಕುಲಾಲ್, ಚಿದಂಬರ ಮಜಿ, ದಿನೇಶ್ ಪೆರ್ಲಬೈಲು, ಸೇಸಪ್ಪ ಮಾಸ್ತರ್ ತುಂಬೆ ಮತ್ತಿತರರು ಉಪಸ್ಥಿತರಿದ್ದರು.

