ಬಂಟ್ವಾಳ: ಬಿ.ಸಿ.ರೋಡ್ ನ ಅಜ್ಜಿಬೆಟ್ಟು ಅಕ್ಕಮಹಾದೇವಿ ಶಿಶು ಮಂದಿರದಲ್ಲಿ ಎಲ್ಲಾ ಬಾಲಗೋಕುಲಗಳ ಸಮ್ಮಿಲನ ಗೋಕುಲೋತ್ಸವವು ಇಂದು ಜರಗಲಿದೆ.

ಇಂದು ಬೆಳಗ್ಗೆ 9ಕ್ಕೆ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಪೊಳಲಿ ರಾಮಕೃಷ್ಣತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ನೆರವೇರಿಸಲಿದ್ದಾರೆ.  ಬಳಿಕ ತಾಲೂಕಿನ ಎಲ್ಲಾ ಬಾಲಗೋಕುಲಗಳ ಮಕ್ಕಳಿಗೆ ಆಟೋಟಸ್ಪರ್ಧೆಗಳು ನಡೆಯಲಿದೆ. ಬಿ.ಸಿ.ರೋಡು ನಾರಾಯಣಗುರು ವೃತ್ತದಿಂದ ಅಜ್ಜಿಬೆಟ್ಟು ಶಿಶುಮಂದಿರದವರೆಗೆ ಭವ್ಯ ಶೋಭಾಯಾತ್ರೆ ಆಯೋಜಿಸಲಾಗಿದೆ.

ಸಂಜೆ 4ಕ್ಕೆ ನಡೆಯುವ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ವಿಎಸ್ ಪದವಿಪೂರ್ವ ಕಾಲೇಜಿನ  ಪ್ರಾಂಶುಪಾಲೆ ಶಶಿಕಲಾ ಕೆ.ವಹಿಸಲಿದ್ದು, ಮುಖ್ಯ ಅಥಿತಿಯಾಗಿ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಗ್ರಾಹಕ ನಿತ್ಯಪ್ರಕಾಶ್ ಬಂಟ್ವಾಳ, ಬಮಠ್ವಾಳ ತಾಲೂಕಿನ ಸೇವಾ ಭಾರತಿ ಇದರ ಅಧ್ಯಕ್ಷ ಕೆ. ರಮೇಶ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ಧಾಮೋಧರ ನೆತ್ತರಕೆರೆ, ಕೋಶಾಧಿಕಾರಿ ಅಜಯ್ ಕೊಂಬ್ರಬೈಲು ಹಾಗೂ ಬಂಟ್ವಾಳ ಗೋಕುಲೋತ್ಸವ ಸಮಿತಿಯ ಅಧ್ಯಕ್ಷ ವಿ.ಪ್ರಭಾಕರ ಪೈ, ಪ್ರ.ಕಾರ್ಯದರ್ಶಿ ಸೂರ್ಲ ವಾಮನ ಪೂಜಾರಿ ಮಣಿಕಂಠಪುರ, ಕೋಶಾಧಿಕಾರಿ ಸಂತೋಷ್ ಕುಮಾರ್ ನೆತ್ತರಕೆರೆ, ಉಪಾಧ್ಯಕ್ಷರುಗಳಾದ ಮಾಧವ ವಳವೂರು, ಶ್ರೀಕಲಾ ಜಾರಂದಗುಡ್ಡೆ, ಕುಸುಮ ಅರಳ,ರಾಮಕೃಷ್ಣ ಪ್ರಭು ವಗ್ಗ, ಕಾರ್ಯದರ್ಶಿ ವೀಣಾ ರಮೇಶ್ ಕೊಡ್ಮಾಣ್, ವಿದ್ಯಾಭಟ್ ಪಲ್ಲಿಪಾಡಿ ಹಾಗೂ ಬಂಟ್ವಾಳ ತಾಲೂಕಿನ ಸೇವಾ ಭಾರತಿ ಇದರ ಟ್ರಸ್ಟಿಗಳು ಭಾಗವಹಿಸಲಿದ್ದಾರೆ. ಭಾಗವಹಿಸಲಿದ್ದಾರೆ. ಪ್ರಮುಖ ಭಾಷಣಕಾರರಾಗಿ ವಿಟ್ಲ ಮೈತ್ರೇಯ ಗುರುಕುಲದ ಅಮೃತ ವರ್ಷಿಣಿ ಮಾತಾಜಿ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

 

By Suddi9

Leave a Reply

Your email address will not be published. Required fields are marked *