ಬೆಂಗಳೂರು: ವೀರಶೈವ-ಲಿಂಗಾಯತರು ಹಿಂದೂಗಳಲ್ಲ ಎಂಬ ವಿವಾದವನ್ನು ಹುಟ್ಟು ಹಾಕು ಮೂಲಕ ಹಿಂದೂ ಧರ್ಮದಲ್ಲಿ ಒಡಕು ಉಂಟು ಮಾಡುತ್ತಿದೆ ಎಂದು ಸಂಶೋಧಕ ಡಾ.ಚಿದಾನಂದಮೂರ್ತಿ ಆತಂಕ ವ್ಯಕ್ತಪಡಿಸಿದ್ದಾರೆ.

555

ನಗರದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಡೆದ ಪ್ರಾಂತೀಯ ಹಿಂದೂ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಧರ್ಮದ ಮೇಲೆ ಅನೇಕ ಆಕ್ರಮಣಗಳು ನಡೆಯುತ್ತಿದ್ದು,  ಇಡೀ ವಿಶ್ವವನ್ನು ಇಸ್ಲಾಂ ಮಾಡಲು ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಇತರೆ ಧರ್ಮದವರು ತಮ್ಮ ಧರ್ಮದ ಬಗ್ಗೆ ತಿಳಿಸಿಲು ನಾಚಿಕೆ ಪಡಲ್ಲ.  ಹಿಂದೂಗಳು ಮಾತ್ರ ಹಿಂದೂ ಎನ್ನಲು ಹಿಂಜರಿಯುತ್ತಿದ್ದು, ಆದ್ದರಿಂದ ನಾವೆಲ್ಲರೂ ಒಗ್ಗಟ್ಟಿನಿಂದ ಹಿಂದು ಎಂಬುದನ್ನು ಎದೆ ತಟ್ಟಿ ಹೇಳಬೇಕು ಎಂದು ಸಲಹೆ ನೀಡಿದರು.

ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಮಾತನಾಡಿ, ‘ಸಾಮಾಜಿಕ ದುಷ್ಟ ಪ್ರವೃತ್ತಿಗಳ ವಿರುದ್ಧ ಹೋರಾಡಲು ಪ್ರತಿಯೊಬ್ಬ ಹಿಂದೂ ಸಂಘಟಕರು
ಸನ್ನದ್ಧರಾಗಬೇಕು’ ಎಂದರು.

ಸನಾತನ ಸಂಸ್ಥೆಯ ರಾಜ್ಯ ಪ್ರಮುಖ ಕಾಶಿನಾಥ ಪ್ರಭು ಮಾತನಾಡಿ, ‘ಹಿಂದೂ ಸಂಘಟಕರು ಹಿಂದೂರಾಷ್ಟ್ರ ಸ್ಥಾಪಿಸಲು ದೈಹಿಕ ಬಲದ ಜತೆಗೆ ಆಧ್ಯಾತ್ಮಿಕ ಬಲ ಹೆಚ್ಚಿಸುವ ಕಾರ್ಯ ಮಾಡಬೇಕು  ಎಂದರು.

By Suddi9

Leave a Reply

Your email address will not be published. Required fields are marked *