ವಿಟ್ಲ: ಇಲ್ಲಿನ ಹನುಮಗಿರಿ ಶ್ರಾಮ ಮಂದಿರದ ರಸ್ತೆಗೆ ಜಿಲ್ಲಾಧಿಕಾರಿಯ ಮಳೆಹಾನಿ ಅನುದಾನದಲ್ಲಿ ಡಾಮರೀಕರಣ ಕಾಮಗಾರಿ ನಡೆಯಲಿದ್ದು, ಈ ಕಾಮಗಾರಿಗೆ ಹನುಮಾನ್ ಪ್ರಿಂಟರ್ರ್ಸ್ ನ ವೆಂಕಟೇಶ್ ಭಟ್ ತೆಂಗಿನಕಾಯಿ ಹೊಡೆಯುವ ಮೂಲಕ ಗುರುವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರಾಮದಾಸ ಶೆಣೈ, ವಿರೋಧ ಪಕ್ಷ ನಾಯಕ ಅಶೋಕ್ ಕುಮಾರ್ ಶೆಟ್ಟಿ, ರಾಧಾಕೃಷ್ಣ ಪೈ, ಹರೀಶ್ ನಾಯಕ್, ರಾಧಾಕೃಷ್ಣ ನಾಯಕ್, ನಿತ್ಯಾನಂದ ನಾಯಕ್, ಸುದರ್ಶನ ಪಡಿಯಾರ್, ನವನೀತ್ ಪೈ, ರಾಘವೇಂದ್ರ ಪೈ, ಹಸನ್ ವಿಟ್ಲ, ವಿಕಾಸ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

