ಬಂಟ್ವಾಳ: ಜಾತ್ಯಾತೀತ ಅಧಾರದಲ್ಲಿ ವ್ರತ್ತಿ ಪರ ಯೋಚನೆಯಲ್ಲಿ ಉತ್ತಮ‌ವಾತರಣದಲ್ಲಿ ಸರಕಾರಿ  ನೌಕರರು ಆಡಳಿತ ಯಂತ್ರವನ್ನು ಚುರುಕುಗೊಳಿಸಿದಾಗ ಅಭಿವ್ರದ್ದಿ ಕೆಲಸಗಳು ಉತ್ತಮವಾಗಿ ನಡೆಯಲು ಸಾಧ್ಯ ಎಂದು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಬಂಟ್ವಾಳ ತಾಲೂಕಿನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ (ರಿ). ಇವರ ನೂತನ ಸಭಾ ಭವನದ ಉದ್ಘಾಟನೆ ಯನ್ನು ನೆರವೇರಿಸಿ ಮಾತನಾಡಿದರು.4

 ೬ನೇ ವೇತನ ಆಯೋಗದ ವಿಚಾರವಾಗಿ ಈಗಾಗಲೇ ಸರಕಾರ ವೇತನ ಆಯೋಗದ ರಚನೆ ಮಾಡಿದೆ. ಇದು ಸಿಗಲು ಪೂರಕವಾದ ನಡವಳಿಕೆಯ ಒಂದು ಭಾಗ ಎಂದು ತಿಳಿದುಕೊಂಡಿದ್ದೀರಿ ಎಂದು ಭಾವಿಸಿದ್ದೇನೆ,ಶ್ರೀಘ್ರವಾಗಿ ಸರಕಾರಿ ನೌಕರರು ಫಲಾನುಭವಿಗಳಾಗುತ್ತೀರಿ ಎಂದರು. ಸರಕಾರಿ ಕೆಲಸ ಯಾವುದೇ ಶಿಫಾರಸನ ಮೇಲೆ ಯಾರಿಗೂ ಸಿಗುತ್ತವೆ ಎನ್ನುವ ತಪ್ಪು ಭಾವನೆ ಬೇಡ ಎಂದು ಸ್ಪಷ್ಟಪಡಿಸಿದರು. ಗುರುಭವನಕ್ಕೆ ಬೇಕಾದ ಪೂರಕ ವ್ಯವಸ್ಥೆ ಗಳನ್ನು ಮಾಡಲು ಸರಕಾರದ ಜೊತೆ ಪ್ರಯತ್ನಿಸುತ್ತೇನೆ. ವಸತಿ ಸಮುಚ್ಚಯ  ನಿರ್ಮಾಣದ ಬಗ್ಗೆ ಯೂ ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಪೂರ್ಣವಾದ ಬೆಂಬಲ ನೀಡುತ್ತೇನೆ ಎಂದರು.6

ಕಾರ್ಯಕ್ರಮ ದ ಅದ್ಯಕ್ಷ ತೆಯನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅದ್ಯಕ್ಷ ಉಮಾನಾಥ ರೈ ಮೇರಾವು ವಹಿಸಿದ್ದರು. ಕಾರ್ಯಕ್ರಮ ದಲ್ಲಿ ತಾ.ಪಂ.ಅದ್ಯಕ್ಷ ಚಂದ್ರಹಾಸ ಕರ್ಕೇರ,ಉಪಾಧ್ಯಕ್ಷ ಅಬ್ಬಾಸ್ ಅಲಿ,ಪುರಸಭಾ ಅದ್ಯಕ್ಷ ರಾಮಕೃಷ್ಣ ಆಳ್ವ,ತಹಶಿಲ್ದಾರ ಪುರಂದರ ಹೆಗ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿಪ್ರಿಂಯಾನ್ ಮಿರಾಂಡ, ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್,ಸಿವಿಲ್ ಇಂಜಿನಿಯರ್ ರಾಮ್ ಪ್ರಸಾದ್ ,ಮಾಜಿ ಅಧ್ಯಕ್ಷ ರುಗಳಾದ ನಾರಾಯಣ ಬೆಳ್ಚಾಪ್ಪಾಡ,ಮೋಹನ್ ರಾವ್,ಸಂಘದ ಖಜಾಂಚಿ ಜೆ.ಜನಾರ್ದನ, ಉಪಾಧ್ಯಕ್ಷ ರುಗಳಾದ ಸುನಂದ ಕೆ.ಪಿ.ಹರಿಪ್ರಸಾದ್ ಶೆಟ್ಟಿ, ಸಂಘದ ಅದ್ಯಕ್ಷ ಉಮಾನಾಥ ರೈ ಮೇರಾವು ಸ್ವಾಗತಿಸಿ ಪ್ರಸ್ತಾನೆಗೈದರು. ಕಾರ್ಯದರ್ಶಿ ಕೆ.ರಮೇಶ್ ನಾಯಕ್ ರಾಯಿ ವಂದಿಸಿದರು. ಕಾರ್ಯಕ್ರಮ ದಲ್ಲಿ ಪ್ರಶಸ್ತಿ ವಿಜೇತ ರನ್ನು ಮತ್ತು ಸೇವೆ ಯಿಂದ ನಿವ್ರತ್ತಿ ಹೊಂದಿದೆ ಸರಕಾರಿ ನೌಕರರ ನ್ನು ಗುರುತಿಸಿ ಗೌರವಿಸಲಾಯಿತು.

By suddi9

Leave a Reply

Your email address will not be published. Required fields are marked *