ಕೈಕಂಬ: ಗುರುಪುರ ಬ್ಲಾಕ್ ಕಾಂಗ್ರೇಸ್ ಅಡ್ಡೂರು ವಲಯ ಸಮಿತಿಯ ವತಿಯಂದ ಗುರುಪುರ ಬಂಗ್ಲೆಗುಡ್ಡೆಯ ಸೈಟ್ ಮನೆಮನೆಗೆ ಭೇಟಿ ನೀಡಿದಾಗ ಬಂಗ್ಲೆಗುಡ್ಡೆಯಲ್ಲಿ ವಾಸವಾಗಿರುವ ಜನರು ಸಮಸ್ಯೆಗಳನ್ನು ಹೇಳಿದರು. ಅದಕ್ಕೆ ಆಯಾಯ ಸಂಭಂದಪಟ್ಟ ಅದಿಕಾರಿಗಳಿಗೆ ತಿಳಿಸಿ ಸಮಸ್ಯೆಯನ್ನು ಪಪರಿಹರಿಸಲಾಗುವುದು ಎಂದು ಕಾಂಗ್ರೇಸ್ ವಲಯ ಸಮಿತಿ ಅಧ್ಯಕ್ಷ ಪುರುಷೋತ್ತಮ ಮಲ್ಲಿ ಭರವಸೆ ನೀಡಿದರು.
ಕಾಂಗ್ರೇಸ್ ವಲಯ ಸಮಿತಿ ಕಾರ್ಯದರ್ಶಿ ಹರೀಶ್ ಭಂಡಾರಿ,ಗುರುಪುರ ಬ್ಲಾಕ್ ಮಹಿಳಾ ಕಾಂಗ್ರೇಸ್ ಕಾರ್ಯದರ್ಶಿ ಅಸ್ಮತ್ ಎಂ.ಎಚ್, ಗುರುಪುರ ಗ್ರಾ.ಪಂ.ಸದಸ್ಯರಾದ ದಾವುದ್,ಗ್ಲಾಡಿಸ್ ಕ್ವಾಡ್ರೆಸ್, ಉಮೈಬಾನು ಹಾಗೂ ಜಿಲ್ಲಾ ಪಂ. ಸದಸ್ಯ ಯು.ಪಿ ಇಬ್ರಾಹಿಂ, ತಾ.ಪಂ ಸದಸ್ಯ ಸಚಿನ್ ಅಡಪ ಮತ್ತಿತರರು ಉಪಸ್ಥಿತರಿದ್ದರು.
