ಬಂಟ್ವಾಳ: ಬಿ.ಸಿ.ರೋಡು ಅಜ್ಜಿಬೆಟ್ಟು ಅಕ್ಕಮಹಾದೇವಿ ಶಿಶು ಮಂದಿರದಲ್ಲಿ ಸೇವಾ ಭಾರತಿ ಬಂಟ್ವಾಳ ತಾಲೂಕು ಗೋಕುಲೋತ್ಸವ ಸಮಿತಿಯ ಆಶ್ರಯದಲ್ಲಿಡಿ. 25ರಂದು ಸೋಮವಾರ ತಾಲೂಕಿನ ಎಲ್ಲಾ ಬಾಲಗೋಕುಲಗಳ ಸಮ್ಮಿಲನ “ಗೋಕುಲೋತ್ಸವ” ಜರುಗಲಿದೆ.

.ಸಾಂದರ್ಬಿಕ ಚಿತ್ರ

images (1)
ಕಾರ್ಯಕ್ರಮ:
ಬೆಳಗ್ಗೆ 9. ಗಂಟೆಗೆ ಬಿ.ಸಿ.ರೋಡುನಾರಾಯಣ ಗುರು ವೃತ್ತದಿಂದ ಅಜ್ಜಿಬೆಟ್ಟು ಶಿಶು ಮಂದಿರದ ತನಕ ಭವ್ಯ ಶೋಭಾಯಾತ್ರೆ.ಬೆಳಗ್ಗೆ 10.ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಮಾಡಲಿದ್ದಾರೆ.

* 10.30ರಿಂದ ಬಾಲಗೋಕುಲದ ಮಕ್ಕಳಿಗೆ ವಿವಿಧ ಸ್ಪರ್ಧೆಗಳು.

ಮಧ್ಯಾಹ್ನ 1.00ರಿಂದ ಸಹಭೋಜನ, 4 ಗಂಟೆಗೆ ಸಮಾರೋಪ ಸಮಾರಂಭ.

ಸಮಾರಂಭದ  ಅಧ್ಯಕ್ಷತೆ ಬಂಟ್ವಾಳ ಎಸ್.ವಿ.ಎಸ್.ಪದವಿಪೂರ್ವ ಕಾಲೇಜುಪ್ರಾಂಶುಪಾಲರು ಶ್ರೀಮತಿ ಶಶಿಕಲಾ ಕೆ.,ಮುಖ್ಯ ಅತಿಥಿಯಾಗಿ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ನಿತ್ಯಪ್ರಕಾಶ ಬಂಟ್ವಾಳ್, ವಿಟ್ಲ ಮೈತ್ರೇಯಿ ಗುರುಕುಲದ ಶ್ರೀಮತಿ ಅಮೃತವರ್ಷಿಣಿ ಮಾತಾಜಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಗೋಕುಲೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *