ನೆತ್ರಕೆರೆ: ಪೂರ್ವದ್ವೇಷ ಶಂಕೆ  ರಿಕ್ಷಾ ಚಾಲಕನ ಅಪಹರಿಸಿ ಬರ್ಬರ ಕೊಲೆನಿಧನರಾದರು. ಬಂಟ್ವಾಳ ತಾಲ್ಲೂಕಿನ ಪುದು ಗ್ರಾಮದ ನೆತ್ರಕೆರೆ ಎಂಬಲ್ಲಿ ರಿಕ್ಷಾ ಚಾಲಕರೊಬ್ಬರನ್ನು ಬಾಡಿಗೆ ನೆಪದಲ್ಲಿ ಅಪಹರಿಸಿ ಬಳಿಕ ಬರ್ಬರವಾಗಿ ಹತ್ಯೆ ಮಾಡಿ ಚರಂಡಿಯಲ್ಲಿ ಎಸೆದ ಘಟನೆ ಭಾನುವಾರ ಬೆಳಕಿಗೆ ಬಂದಿದೆ.  ಮೃತರನ್ನು ಮಾರಿಪಳ್ಳ-ಸುಜೀರು ಸಮೀಪದ ಬದಿಗುಡ್ಡೆ ನಿವಾಸಿ ಕುಂಞಿ ಮೋನು ಎಂಬವರ ಪುತ್ರ, ರಿಕ್ಷಾ ಚಾಲಕ ಮುಹಮ್ಮದ್ ರಿಫಾಯಿ (28) ಎಂದು ಗುರುತಿಸಲಾಗಿದೆ. ಫರಂಗಿಪೇಟೆಯಲ್ಲಿ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದ ಮುಹಮ್ಮದ್ ರಿಫಾಯಿ ಇವರನ್ನು ಮೂವರು ಅಪರಿಚಿತರು ಶನಿವಾರ ಸಂಜೆ ಸುಮಾರು ಆರು ಗಂಟೆ ವೇಳೆಗೆ ಬಾಡಿಗೆ ನೆಪದಲ್ಲಿ ಪೊಳಲಿ ಕಡೆಗೆ ತೆರಳಿದ್ದರು ಎನ್ನಲಾಗಿದೆ. ಅಂದು ರಾತ್ರಿಯಾದರೂ ರಿಫಾಯಿ ಮನೆಗೆ ಬಾರದ ಹಿನ್ನಲೆಯಲ್ಲಿ ಪತ್ನಿ ಫಾತಿಮಾ ಮತ್ತು ಮನೆಯವರು ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ಧಾವಿಸಿ ತಡರಾತ್ರಿ ದೂರು ಸಲ್ಲಿಸಿದ್ದರು.  ಈತನ ಸಹೋದ್ಯೋಗಿ ರಿಕ್ಷಾ ಚಾಲಕರು ಮತ್ತು ಸ್ನೇಹಿತರು ಹಾಗೂ ಸಂಬಂಧಿಕರು ಒಟ್ಟು ಸೇರಿಕೊಂಡು ಶನಿವಾರ ರಾತ್ರಿ ಹುಡುಕಾಟ ನಡೆಸಿದಾಗ ನೆತ್ರಕರೆ ಎಂಬಲ್ಲಿ ರಿಫಾಯಿ ಕೊಂಡು ಹೋಗಿದ್ದ ಅಟೋ ರಿಕ್ಷಾ ಪತ್ತೆಯಾಗಿತ್ತು. ಇದರಿಂದಾಗಿ ಮತ್ತಷ್ಟು ಆತಂಕಗೊಂಡ ರಿಕ್ಷಾ ಚಾಲಕರು ಮತ್ತು ಮನೆಯವರು ಭಾನುವಾರ ಬೆಳಿಗ್ಗೆ ಮತ್ತೆ ಹುಡುಕಾಟ ಆರಂಭಿಸಿದ್ದರು. ಇದೇ ವೇಳೆ ನೆತ್ರಕೆರೆ ಪಕ್ಕದಲ್ಲೇ ಇರುವ ನಿರ್ಜನ ಪ್ರದೇಶ ಪೊದೆಯೊಂದರ ನಡುವೆ ರಕ್ತಸಿಕ್ತ ರಿಫಾಯಿ ಮೃತದೇಹ ಪತ್ತೆಯಾಗಿದೆ. ಆದರೆ ಶನಿವಾರ ರಾತ್ರಿ ಸುರಿದ ಮಳೆಗೆ ಮೈಮೇಲಿನ ರಕ್ತ ಚರಂಡಿ ನೀರಿನ ಮೂಲಕ ತೊಳೆದು ಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಧಾವಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳದಲ್ಲಿ ಅಪಾರ ಮಂದಿ ಕುತೂಹಲದಿಂದ ಧಾವಿಸಿದ್ದರು. ಇದೊಂದು ವ್ಯವಸ್ಥಿತ ಕೊಲೆ ಎಂದು ಖಚಿತಪಡಿಸಿಕೊಂಡ ಪೊಲೀಸರು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.  ಕಳೆದ ಜೂ.21ರಂದು ಮಾರಿಪಳ್ಳ ಸಮೀಪದ ಸುಜೀರು ಶಾಲಾ ಬಳಿ ದುಷ್ಕಮರ್ಿಗಳ ತಂಡವೊಂದು ಹಳೆ ರೌಡಿ ನೌಶಾದ್ ಎಂಬಾತನನ್ನು ತಲವಾರಿನಿಂದ ಕಡಿದು ಹತ್ಯೆ ಮಾಡಿತ್ತು. ಈ ಹಂತಕರ ತಂಡದಲ್ಲಿ ತೌಸೀಫ್ ಎಂಬಾತನು ಇದೇ ರಿಕ್ಷಾ ಚಾಲಕ ಮುಹಮ್ಮದ್ ರಿಫಾಯಿನ ಕಿರಿಯ ಸಹೋದರ ಎನ್ನಲಾಗಿದೆ. ಇದರಿಂದಾಗಿ ನೌಶಾದ್ ಕೊಲೆಗೆ ಪ್ರತೀಕಾರ ಎಂಬಂತೆ ಅದೇ ತಂಡದಿಂದ ರಿಫಾಯಿ ಕೊಲೆ ನಡೆದಿದೆ ಎಂಬ ಶಂಕೆ ಪೊಲೀಸರಿಂದ ವ್ಯಕ್ತವಾಗಿದೆ. ನೌಶಾದ್ ಹತ್ಯಾ ಶೈಲಿಯಲ್ಲೇ ಮುಹಮ್ಮದ್ ರಿಫಾಯಿ ತಲೆ, ಕೈ, ಕಾಲು ಮತ್ತಿತರ ಭಾಗಗಳಿಗೆ ಕೊಚ್ಚಿ ಕೊಲೆ ಮಾಡಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

ಬಂಟ್ವಾಳ ತಾಲ್ಲೂಕಿನ ಪುದು ಗ್ರಾಮದ ನೆತ್ರಕೆರೆ ಪೊದೆಯೊಂದರ ನಡುವೆ ದೊರೆತ ಮುಹಮ್ಮದ್ ರಿಫಾಯಿ ಮೃತದೇಹ ಪತ್ತೆಯಾಗಿದೆ.10btl-Mohd Rifayi-1

ಪತ್ನಿ ಗಭರ್ಿಣಿ:

ಈ ಹಿಂದೆ ಗಾಂಜಾ ದಂಧೆಯಲ್ಲಿ ಗುರುತಿಸಿಕೊಂಡಿದ್ದ ನೌಶಾದ್ ಹತ್ಯೆಯಾದಾಗ ಆತನ ಪತ್ನಿ ತುಂಬು ಗಭರ್ಿಣಿಯಾಗಿದ್ದು, ಇದೀಗ ಕೊಲೆಯಾದ ರಿಕ್ಷಾ ಚಾಲಕ ರಿಫಾಯಿ ಕಳೆದ ಆರು ತಿಂಗಳ ಹಿಂದೆಯಷ್ಟೇ ಸ್ಥಳೀಯ ಸ್ಥಳೀಯ ಬಡ ಯುವತಿಯೊಬ್ಬಳನ್ನು ವಿವಾಹವಾಗಿದ್ದರು. ಇದೀಗ ಈತನ ಪತ್ನಿ ಕೂಡಾ ನಾಲ್ಕು ತಿಂಗಳ ಗಭರ್ಿಣಿ ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.
ಶ್ರಮಜೀವಿಯಾಗಿದ್ದ ಮುಹಮ್ಮದ್ ರಿಫಾಯಿ ಸೌಮ್ಯ ಸ್ವಭಾವದ ಯುವಕನಾಗಿದ್ದು, ಯಾವುದೇ ಸಂಘ-ಸಂಸ್ಥೆಗಳಲ್ಲಿ ಕೂಡಾ ಗುರುತಿಸಿಕೊಳ್ಳದೆ ಯಾರೊಂದಿಗೂ ವೈರತ್ವವನ್ನೂ ಕಟ್ಟಿಕೊಂಡಿರಲಿಲ್ಲ ಎಂದು ಸ್ಥಳೀಯ ರಿಕ್ಷಾ ಚಾಲಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಂಞಿಮೋನು ದಂಪತಿಗೆ ಮೂವರು ಪುತ್ರರು ಮತ್ತು ಮೂವರು ಪುತ್ರಿಯರಿದ್ದಾರೆ. ಈ ಪೈಕಿ ಹಿರಿಯ ಪುತ್ರ ಸ್ಥಳೀಯ ಖಾಸಗಿ ಬಸ್ಸಿನಲ್ಲಿ ಕ್ಲೀನರ್ ಕೆಲಸ ಮಾಡುತ್ತಿದ್ದು, ಮೃತ ರಿಫಾಯಿ ಎರಡನೇ ಪುತ್ರನಾಗಿದ್ದು, ಮೂರನೇ ಪುತ್ರ ತೌಸೀಫ್ ಎಂಬಾತನು ನೌಶಾದ್ ಕೊಲೆ ಆರೋಪಿಯಾಗಿ ಜೈಲು ಸೇರಿದ್ದಾನೆ. ಇದರಿಂದಾಗಿ ಮನೆಯಲ್ಲಿ ಬಡ ಕುಟುಂಬವನ್ನು ಮುನ್ನಡೆಸಲು ನೆರವಾಗುತ್ತಿದ್ದ ರಿಫಾಯಿ ಕೂಡಾ ಅನಾವಶ್ಯಕವಾಗಿ ಹಂತಕರ ಪಾಲಾಗಿರುವುದು ಮೃತರ ಹೆತ್ತವರನ್ನು ಕಂಗೆಡಿಸಿದೆ.
ಬಂಧನಕ್ಕೆ ಆಗ್ರಹ:
ಫರಂಗಿಪೇಟೆಯಲ್ಲಿ ದುಡಿಯುತ್ತಿದ್ದ ರಿಕ್ಷಾ ಚಾಲಕ ರಿಫಾಯಿ ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸಿ ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಫರಂಗಿಪೇಟೆಯಿಂದ ನೂರಾರು ಮಂದಿ ರಿಕ್ಷಾ ಚಾಲಕರು ಭಾನುವಾರ ಒಟ್ಟು ಸೇರಿಕೊಂಡು ಬಂಟ್ವಾಳ ಗ್ರಾಮಾಂತರ ಠಾಣೆಗೆ ರಿಕ್ಷಾ ಸಹಿತ ಮೆರವಣಿಗೆ ನಡೆಸಿ ಇನ್ಸ್ಪೆಕ್ಟರ್ ಯು.ಕೆ.ಬೆಳ್ಳಿಯಪ್ಪ ಇವರಿಗೆ ಮನವಿ ಸಲ್ಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಡಿವೈಎಸ್ಪಿ ರಶ್ಮಿ ಪೆರಡಿ, ಇನ್ಸ್ಪೆಕ್ಟರ್ ಯು.ಕೆ.ಬೆಳ್ಳಿಯಪ್ಪ ಗ್ರಾಮಾಂತರ ಠಾಣಾಧಿಕಾರಿ ನಾಗರಾಜ್ ಭೇಟಿ ಮತ್ತಿತರರು ಭೇಟಿ ನಿಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮಂಗಳೂರಿನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಭಾನುವಾರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಜೆ ವೇಳೆಗೆ ಮನೆ ಸಮೀಪದ ಮಾರಿಪಳ್ಳ ಬದ್ರಿಯಾ ಮಸೀದಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.

 

By suddi9

Leave a Reply

Your email address will not be published. Required fields are marked *