ವಿಟ್ಲ : “ಕನ್ನಡ ನಮ್ಮ ಮಾತೃ ಭಾಷೆ ಕನ್ನಡದ ನೆಲದಲ್ಲಿ ಜನಿಸಿದ ನಾವು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಬ್ದಾರಿಯನ್ನು ಹೊಂದಿದ್ದೇವೆ. ಇದನ್ನು ಸರಿಯಾಗಿ ಅರಿತು ನಿಭಾಯಿಸಬೇಕು” ಎಂದು ಶಾಲಾ ಆಡಳಿತಾಧಿಕಾರಿ ಸಿ.ಶ್ರೀಧರ್ ರವರು ಧ್ವಜರೋಹಣ ನೆರವೇರಿಸಿ ಹೇಳಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿಯರಾದ ವಿಜಯಲಕ್ಷ್ಮೀವಿ.ಶೆಟ್ಟಿ , ಗ್ರೇಸ್.ಪಿ. ಸಲ್ಡಾನಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


