ವಿಟ್ಲ: ವಲಯ ದೇವಾಡಿಗರ ಸಮಾಜ ಸೇವಾ ಸಂಘ ಇದರ 26 ನೇ ವರ್ಷದ ವಾರ್ಷಿಕ ಮಹಾಸಭೆ ಮತ್ತು ಸಾರ್ವಜನಿಕ ಸತ್ಯನಾರಾಯಣ ಪೂಜೆಯು ಮಂಗಳಪದವಿನ ಸಂಘದ ಸಮುದಾಯ ಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಜನಾರ್ಧನ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಮಾಜಿ ಅಧ್ಯಕ್ಷ ವಾಮನ ಮುರೋಳಿ ಭಾಗವಹಿಸಿದ್ದರು. ವಿಶ್ವನಾಥ ದೇವಾಡಿಗ ಪ್ರಾರ್ಥಿಸಿದರು. ಜತೆ ಕಾರ್ಯದರ್ಶಿ ಯತೀಶ ದೇವಾಡಿಗ ಸ್ವಾಗತಿಸಿದರು.

s pಕಾರ್ಯದರ್ಶಿ ರಮೇಶ ದೇವಾಡಿಗ ಮಂಕುಡೆ ವರದಿ ವಾಚಿಸಿದರು. ಸದಸ್ಯ ಚಂದ್ರಹಾಸ ದೇವಾಡಿಗ ವಂದಿಸಿದರು. ಸಂಗದ ಉಪಾಧ್ಯಕ್ಷ ರಮಾನಾಥ ದೇವಾಡಿಗ, ಸದಸ್ಯರು ಮತ್ತು ಇತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *