ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಜೈನ ಬಸದಿಯಲ್ಲಿ ಚಾತುರ್ಮಾಸ ವೃತಾಚರಣೆ ಪೂರ್ಣಗೊಳಿಸಿದ ಮುನಿಶ್ರೀ 108 ವೀರಸಾಗರ ಮುನಿ ಮಹಾರಾಜರು
ಬಂಟ್ವಾಳ ಪೇಟೆಯ ಮೂಲಕ ಪಂಜಿಕಲ್ಲು ಆದಿನಾಥ ಸ್ವಾಮಿ ಬಸದಿಗೆ ಕಾಲ್ನಡಿಗೆ ಮೂಲಕ ಸೋಮವಾರ ತೆರಳಿದರು. ಸಮಿತಿ ಅಧ್ಯಕ್ಷ ರತ್ನಾಕರ ಜೈನ್, ಕಾರ್ಯಾಧ್ಯಕ್ಷ ಸುದರ್ಶನ ಜೈನ್, ಧರಣೇಂದ್ರ ಇಂದ್ರ, ಭುವನೇಂದ್ರ ಇಂದ್ರ, ಹರ್ಷರಾಜ್ ಬಲ್ಲಾಳ್, ವೃಷಭರಾಜ ಇಂದ್ರ, ಶ್ರೀಮಂಧರ್ ಜೈನ್ ಮತ್ತಿತರರು ಇದ್ದರು.

