ಬಂಟ್ವಾಳಃ ನ.೧೫ ರಂದು ಮಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸಹಕಾರಿ ಸಪ್ತಾಹ ೨೦೧೭ ಇದರ ಪೂರ್ವ ಭಾವಿ ಬಂಟ್ವಾಳ ತಾಲೂಕು ಮಟ್ಟದ ಎಲ್ಲಾ ಸಹಕಾರ ಸಂಘಗಳ ಸಮಾಲೋಚನಾ ಸಭೆ ಸಮಾಜ ಸೇವಾ ಸಹಕಾರಿ ಬ್ಯಾಂಕ್ ನ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಟಿ.ಜಿ.ರಾಜಾರಾಂ ಭಟ್ ಸಹಕಾರಿ ಶಕ್ತಿಯನ್ನು ಪ್ರದರ್ಶನ ಮಾಡಲು ಸಹಕಾರಿಗಳಿಗೆ ಉತ್ತಮ ಅವಕಾಶ. ಹಾಗಾಗಿ ಸಪ್ತಾಹ ವನ್ನು ಯಶಸ್ವಿಯಾಗಿ ನಡೆಸಲು ಯಾವ ರೀತಿಯ ರೂಪುರೇಷೆ ಗಳನ್ನು ಹಾಕಿಕೊಂಡು ಮುಂದುವರಿಯಬೇಕು ಎನ್ನುವ ಮಾಹಿತಿ ನೀಡಿದರು.
ಸಹಕಾರಿಗಳು ಪಕ್ಷ ಬೇದ ಮರೆತು ಒಗ್ಗಟ್ಟನಿಲ್ಲಿ ಸಹಕಾರಿ ಸಪ್ತಾಹ ಆಚರಿಸಿದರೆ ಸಾರ್ಥಕತೆ ಪಡೆಯುತ್ತದೆ.ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್ ಪ್ರಸ್ತಾವನೆ ಮಾಡಿದರು. ಸಹಕಾರಿ ಅಭಿವೃದ್ಧಿ ಅದಿಕಾರಿ ತ್ರಿವೇಣಿ ರಾವ್ ಮಾತನಾಡಿ ಸಹಕಾರಿ ಸಪ್ತಾಹಕ್ಕೆ ಸಂಬಂದಿಸಿದಂತೆ ಇಲಾಖೆಯ ವತಿಯಿಂದ ಮಾಹಿತಿ ನೀಡಿದರು.ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್ ಪ್ರಸ್ತಾವನೆ ಮಾಡಿದರು. ಸಹಕಾರಿ ಅಭಿವೃದ್ಧಿ ಅದಿಕಾರಿ ತ್ರಿವೇಣಿ ರಾವ್ ಮಾತನಾಡಿ ಸಹಕಾರಿ ಸಪ್ತಾಹಕ್ಕೆ ಸಂಬಂದಿಸಿದಂತೆ ಇಲಾಖೆಯ ವತಿಯಿಂದ ಮಾಹಿತಿ ನೀಡಿದರು.
ವೇದಿಕೆಯ ಲ್ಲಿ ಜಿ.ಪಂ.ಸದಸ್ಯ ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ , ಸಮಾಜ ಬ್ಯಾಂಕ್ ನ ಅಧ್ಯಕ್ಷ ಸುರೇಶ್ ಕುಲಾಲ. ಕೆಥೋಲಿಕ್ ಸೊಸೈಟಿ ಅಧ್ಯಕ್ಷ ಹೆರಾಲ್ಡ್ ಡಿ.ಸೋಜ. ವಿಟ್ಲ ಮಹಿಳಾ ವಿವಿದ್ದೋದ್ದೇಶ ಸಹಕಾರಿ ಸಂಘಧ ಅಧ್ಯಕ್ಷೆ ಧರ್ಮಾವತಿ. ಸಹಕಾರಿ ಯೂನಿಯನ್ ನಿರ್ದೇಶಕ ದೇವದಾಸ ಅಡಪ. ಬಂಟ್ವಾಳ ವಲಯ ಮೇಲ್ವಿಚಾರಕ ಕೇಶವ ಕಿಣಿ.ಬಂಟ್ವಾಳ ವಿವಿಧ ಸಹಾಕರಿ ಬ್ಯಾಂಕ್ ನ ಅಧ್ಯಕ್ಷ ರುಗಳು ನಿರ್ದೇಶಕ ರು. ಮುಖ್ಯ ಕಾರ್ಯನಿರ್ವಾಣಾಧಿಕಾರಿಗಳು ಉಪಸ್ಥಿತರಿದ್ದರು. ವಾಮದ ಪದವು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಅಲ್ಬರ್ಟ ಡಿ.ಸೋಜ ಸ್ವಾಗತಿಸಿ, ಹಾಪ್ ಕಾಮ್ಸ್ ಜಿಲ್ಲಾಧ್ಯಕ್ಷ ಲಕ್ವೀನಾರಾಯಣ ಉಡುಪ ವಂದಿಸಿದರು. ವರ್ತಕರ ಸಹಕಾರಿ ಸಂಘದ ಅಧ್ಯಕ್ಷ ಸುಬಾಶ್ಚಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು.
