ಬಂಟ್ವಾಳ:  ಕರ್ನಾಟಕ ಘನ ಸರಕಾರದ ಮುಖ್ಯ ಮಂತ್ರಿಗಳು ರೂ. 252 ಕೋಟಿ ವೆಚ್ಚದ ಕಾಮಗಾರಿಗಳು ಉದ್ಘಾಟನೆ ಶಂಕು ಸ್ದಾಪನೆಗೆ ಆಗಮಿಸಿ ಬಂಟ್ವಾಳ ತಾಲೂಕಿಗೆ ಕಳೆದ 4 ವರ್ಷಗಳಲ್ಲಿ 1000 ಕೋಟಿ ರೂ. ಅನುದಾನ ಒದಗಿಸಿದ್ದು ವಿದ್ಯಾರ್ಥಿಗಳ, ಮಹಿಳೆಯರ, ರೈತರ, ಅಲ್ಪಸಂಖ್ಯಾತರ ಕಲ್ಯಾಣ ಕ್ರಮಗಳನ್ನು ಅಭಿವೃದ್ಧ್ದಿ ಕಾರ್ಯಗಳೊಂದಿಗೆ ಎಲ್ಲರಿಗೂ ಸಮಪಾಲು ಎಲ್ಲರಿಗೂ ಸಮಬಾಳು ತತ್ವದೊಂದಿಗೆ ಉತ್ತಮ ಸಮಾಜ ಕಟ್ಟಿ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡಿರುವುದಾಗಿ ಹೇಳಿದ್ದಾರೆ.

ಮಂಗಳೂರಿಗೆ ಕುಡಿಯುವ ನೀರು ಸರಬರಾಜಿಗೆ ಜಿಲ್ಲೆಯ ಜೀವನದಿ ನೇತ್ರಾವತಿಗೆ ತುಂಬೆಯಲ್ಲಿ 11 ಮೀ ಎತ್ತರದ ಡ್ಯಾಂ ನಿರ್ಮಿಸಿ ರಾಜ್ಯ ಹೈಕೋರ್ಟು ಆದೇಶಿಸಿದಂತೆ ರೈತರ ಸಮಕ್ಷಮ ಮುಳುಗಡೆ ಜಮೀನು ಸರ್ವೆಮಾಡಿ ಪಾರದರ್ಶಕ ಮಾಹಿತಿ ನೀಡಿ ನ್ಯಾಯೋಚಿಸಿ ಸೂಕ್ತ ಪರಿಹಾರವನ್ನು ಕೇಂದ್ರ ಜಲ ಆಯೋಗದ ನಿರ್ದೇಶನದಂತೆ ವರತೆ ಪ್ರದೇಶವನ್ನು ಸೇರಿಸಿ ರೈತರಿಗೆ ನ್ಯಾಯ ಒದಗಿಸಬೇಕಾಗಿ ತಿಳಿಸಿದರು, ಈ ಬಗ್ಗೆ ಸರಕಾರಕ್ಕೆ ನ್ಯಾಯಾಂಗ ನಿಂದನೆ ನೋಟಿಸು ಜಾರಿಯಾಗಿದ್ದರೂ ಕಳೆದ 14 ವರ್ಷಗಳಿಂದ ಬಂಟ್ವಾಳ ತಾಲೂಕಿನ ನೇತ್ರಾವತಿ ಕಿನಾರೆಯ 6 ಗ್ರಾಮಗಳ ರೈತರ ಸಂಕಷ್ಟವನ್ನು ಪರಿಹರಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿದೆ.ಇದು ರೈತರಲ್ಲಿ ನಿರಾಶೆಯನ್ನುಂಟುಮಾಡಿದೆ.

ಅನ್ನದಾತನ ಈ ದೀರ್ಘಕಾಲಿನ ತ್ವರಿತ ಸಮಸ್ಯೆಯನ್ನು ಸರಕಾರ ಮರೆತಿದೆಯೇ, ಮಾನ್ಯ ಸಿದ್ದರಾಮಯ್ಯನವರು ರೈತರ ಸಮಸ್ಯೆಯನ್ನು ನಿರ್ಲಕ್ಷಿಸಿದಾರೆಯೇ ಎಂಬ ಸಂಶಯ ರೈತರನ್ನು ಕಾಡುತ್ತಿದೆ.ಉದ್ಘಾಟನಾ ಭಾಗ್ಯ ಕಾಣದ ಈ ನೂತನ ತುಂಬೆ ಡ್ಯಾಂ ರೈತರಿಗೆ ಕೃಷಿಯನ್ನು ನಂಬಿ ಜೀವಿಸುವವರಿಗೆ ಪರಿಹಾರ ಭಾಗ್ಯ ಒದಗಿಸಿತೇ ಎಂಬುದು ರೈತರ ಯಕ್ಷ ಪ್ರಶ್ನೆ . ಇನ್ನಾದರೂ ನಮ್ಮ ಜನನಾಯಕರಿಗೆ ಮುಂದಿನ ಚುನಾವಣೆಯಲ್ಲಾದರೂ ಮನ ಮುಟ್ಟುವುದೇ, ಎಂಬುದಾಗಿ ತುಂಬೆ ಡ್ಯಾಂ ಸಂತ್ರಪ್ತ ರೈತರು ಹೋರಾಟ ಸಮಿತಿ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಎನ್.ಕೆ ಇದ್ದಿನಬ್ಬ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ಮನೋಹರ ಶೆಟ್ಟಿ, ತಾಲೂಕು ಅಧ್ಯಕ್ಷ ಶರತ್ ಕುಮಾರ್ , ಕಾರ್ಯದರ್ಶಿ ಸುದೇಶ್ ಮಯ್ಯ ರೈತರ ಹಿತಾಸಕ್ಕಿ ಕಾಪಾಡುವಂತೆ ಒತ್ತಾಯಿಸಿದ್ದಾರೆ.¸

By suddi9

Leave a Reply

Your email address will not be published. Required fields are marked *