ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕೆಲಸ-ಕಾರ್ಯಗಳು ಅತ್ಯಂತ ಕ್ಷಿಪ್ರಗತಿಯಲ್ಲಿ ಮುಂದುವರಿದಿದೆ. ದೇವಳದ ಆವರಣ, ಹೊರಗಡೆ ಕ್ರೇನು ಹಾಗೂ ಇತರ ಆಧುನಿಕ ಉಪಕರಣಗಳೊಂದಿಗೆ ಕಾರ್ಮಿಕರು ಯದ್ದೋಪಾದಿಯಲ್ಲಿ ಕೆಲಸ ನಡೆಸುತ್ತಿದ್ದಾರೆ.
ಜೀರ್ಣೋದ್ಧಾರಕ್ಕೆ ಮುಂಚೆ ಇಡಲಾಗಿದ್ದ ತಾಂಬೂಲ ಪ್ರಶ್ನೆ ಹಾಗೂ 2008ರಲ್ಲಿ ನಡೆಸಲಾಗಿದ್ದ ಅಷ್ಟಮಂಗಳದಲ್ಲಿ ಸೂಚಿಸಲ್ಪಟ್ಟ ನಿರ್ದೇಶನಗಳು ಹಾಗೂ ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ವಾಸ್ತು ಶಿಲ್ಪಿ ಮಹೇಶ್ ಮುನಿಯಂಗಳ್ ಅವರ ನೇತೃತ್ವದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಪೊಳಲಿ ಅಮ್ಮ ಹಾಗೂ ಪರಿವಾರ ದೇವರ ಶಿಲಾಮಯ ಆಲಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ದೇವಳದಲ್ಲಿ ನಡೆಯುತ್ತಿರುವ ದೇವರ ಕಾರ್ಯದಲ್ಲಿ ಸ್ವಯಂ-ಸೇವಕರ ದಂಡೇ ಭಾಗಿಯಾಗಿದ್ದು, ಅತ್ಯುತ್ಸಾಹದಿಂದ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ. ದೇವಳದ ಆವರಣದಲ್ಲಿ ಸ್ಥಾಪಿಸಲಾಗಿರುವ ಬಾಲಾಯಗಳಲ್ಲಿ ಶ್ರೀ ರಾಜರಾಜೇಶ್ವರೀ ದೇವಿ, ಶ್ರೀ ದುರ್ಗಾಪರಮೇಶ್ವರೀ, ಶ್ರೀ ಭದ್ರಕಾಳಿ,ಕ್ಷೇತ್ರಪಾಲ, ಕೊಡಮಣಿತ್ತಾಯಿ ಹಾಗೂ ಇತರ ದೇವರಿಗೆ ನಿತ್ಯ ಸಾಮಾನ್ಯ ಪೂಜೆ ನಡೆಯುತ್ತಿದೆ. ಈಗಲೂ ವಿಶೇಷ ದಿನ ಹಾಗೂ ರಜಾ ದಿನಗಳಲ್ಲಿ ಭಕ್ತಜನರ ದಂಡೇ ಹರಿದು ಬರುತ್ತಿದೆ.21 vp prarthane
21-03

21-00

polali1

polali6

21-00
* ಹೊರಗಡೆ ಕೆತ್ತನೆಯ ಸುಂದರ ವಾಸ್ತವ….

ದೇವಸ್ಥಾನದ ಹೊರಗಡೆ ಶಿಲೆ ಕಲ್ಲು, ಕೆಂಪು ಕಲ್ಲು, ಮರದ ಕೆತ್ತನೆ ಕಾರ್ಯದಲ್ಲಿ ನುರಿತ ಕಾರ್ಮಿಕರು ನಿರತರಾಗಿದ್ದು, ಇದೊಂದು ಸುಂದರ ವಾಸ್ತವವಾಗಿದೆ. ಎಲ್ಲೆಡೆ ನೋಡಿದರಲ್ಲಿ ಶಿಲೆ, ಕೆಂಪು ಕಲ್ಲಿನ ರಾಶಿ ಕಂಡು ಬರುತ್ತದೆ. ಆಗೊಮ್ಮೆ-ಈಗೊಮ್ಮೆ ಎಲ್ಲೆಡೆ ಧೂಳು ಏಳುತ್ತಿದೆ. ಒಂದೆಡೆ ಸಿದ್ಧಪಡಿಸಲಾದ ಶಿಲೆ-ಕೆಂಪು ಕಲ್ಲುಗಳು, ಮತ್ತೊಂದೆಡೆ ಒಪ್ಪ-ಓರಣವಾಗಿ ಪೋಣಿಸಲಾದ ಮರದ ಕೆತ್ತನೆಯ ಗೋಪುರಾಕೃತಿ ನೋಡುವುದೇ ಹಬ್ಬವಾಗಿದೆ. ಇನ್ನೊಂದು ಕಡೆಯಲ್ಲಿ ವಿನ್ಯಾಸಕಾರರು ಮರದ ಬಾಗಿಲು, ದಾರಂದಗಳಲ್ಲಿ ವಿಶಿಷ್ಠ ಕಲಾಕೃತಿ ಕೆತ್ತನೆಯಲ್ಲಿ ತೊಡಗಿದ್ದಾರೆ. ಪ್ರಸಕ್ತ ಇವೆಲ್ಲವೂ ದೇವಸ್ಥಾನಕ್ಕೆ ಆಗಮಿಸುವ ಭಕ್ತಜನರ ಮನಸ್ಸು ಮುದುಗೊಳಿಸುವಂತಿದೆ.
ವಾಸು ಆಚಾರ್ಯರ ಪುತ್ರರಾದ ಗಣೇಶ ನೇತೃತ್ವದ ಕಾರ್ಮಿಕರು ಮರದ ಕೆಲಸದಲ್ಲಿ ನಿರತರಾಗಿದ್ದರೆ ಶೇಖರ, ಲಕ್ಷ್ಮಣ,polali 2

ದೇವು, ಸುೀರ ಮೊದಲಾದವರು ಕೆಂಪುಕಲ್ಲಿನ ಕೆಲಸದಲ್ಲಿ ತೊಡಗಿದ್ದಾರೆ. ಕೃಷ್ಣ ನಾಯ್ಕ್ ಮುರುಡೇಶ್ವರ ಮರದ ಕಂಬಗಳು ಮತ್ತು ದಾರಂದಗಳಲ್ಲಿ ಕಲಾಕೃತಿ ಚಿತ್ರಿಸುತ್ತಿದ್ದಾರೆ. ಕಾರ್ಕಳದ ಕುಪ್ಪು ಸ್ವಾಮಿ ಹಾಗೂ ವಿಶ್ವನಾಥ ಮುಖ್ಯ ಶಿಲ್ಪಿಯಾಗಿದ್ದಾರೆ. ಹೀಗೆ ನೂರಾರು ಕಾರ್ಮಿಕರು ತಮ್ಮತಮ್ಮ ಕೆಲಸಕಾರ್ಯಗಳಲ್ಲಿ ಮಗ್ನರಾಗಿದ್ದಾರೆ.
ಇಲ್ಲಿ ಮರದ ಕೆಲಸ ಹಿಂದಿನ ವರ್ಷವೇ ಆರಂಭವಾಗಿತ್ತು. ದೇವರ ಆಲಯದ ಸುತ್ತ ಹಾಗೂ ಒಳ ಗೋಪುರಕ್ಕೆ ಅಳವಡಿಸುವ ಕಪ್ಪು ಮತ್ತು ಕೆಂಪು ಕಲ್ಲಿನ ಕೆತ್ತನೆ ಕೆಲಸ ಕಳೆದ ನಾಲ್ಕು ತಿಂಗಳಿಂದ ಅಹೋರಾತ್ರಿ ನಡೆಯುತ್ತಿದೆ. ಈಗಾಗಲೇ ದೇವಸ್ಥಾನದ ಗರ್ಭಗುಡಿಯ ಎದುರಿನ ಅಡಿಪಾಯ ನಿರ್ಮಾಣವಾಗಿದ್ದು, ಅಲ್ಲೇ ಎದುರಿಗೆ ನಿರ್ಮಾಣಗೊಂಡಿರುವ ದೇವರ ಗುಡಿಯೊಂದಕ್ಕೆ ಶಿಲೆಕಂಬ ಸ್ಥಾಪಿಸಿ, ಮರದ ಕೆಲಸ ಪೂರ್ಣಗೊಳಿಸಲಾಗಿದೆ. ಫ್ರೆಬ್ರವರಿ ತಿಂಗಳೊಳಗೆ ಜೀರ್ಣೋದ್ಧಾರ ಕಾಮಗಾರಿ ಮುಗಿದು, ಜಾತ್ರೆಗೆ ಮುಂಚೆ ಬ್ರಹ್ಮಕಲಶೋತ್ಸವ ಜರುಗಲಿದೆ ಎಂದು ದೇವಸ್ಥಾನದ ಅಕಾರಿಯೊಬ್ಬರು ತಿಳಿಸಿದರು.polali6

ನಿರಂತರ ಶ್ರಮದಾನ

ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ವ್ಯಾಪ್ತಿಯಲ್ಲಿ ಸಾವಿರ ಸೀಮೆ ಇದ್ದು, ಎಲ್ಲ ಕಡೆಯ ಸಂಘ-ಸಂಸ್ಥೆಯ ಕಾರ್ಯಕರ್ತರು, ಯುವಜನರು ಹಾಗೂ ಸುತ್ತಲ-ದೂರದ ಆಸ್ತಿಕ ಬಂಧುಗಳು ಇಲ್ಲಿಗಾಗಮಿಸಿ ಮಳೆ-ಗುಡುಗು-ಮಿಂಚು ಲೆಕ್ಕಿಸದೆ ಶ್ರಮದಾನ ನಡೆಸುತ್ತಿದ್ದಾರೆ. ಯುವಜನರ ತಂಡ ಅತ್ಯಂತ ಲವಲವಿಕೆಯಿಂದ ಶ್ರಮದಾನ ನಡೆಸಿ, ಆಡಳಿತ ಮಂಡಳಿಯ ಪ್ರಸಂಶೆಗೆ ಪಾತ್ರವಾಗಿದೆ.

ನಿರಂತರ ಭಜನೆ
ದೇವಳದ ಆವರಣದಲ್ಲಿ ಸ್ಥಾಪಿಸಲಾಗಿರುವ ಬಾಲಾಯಗಳಲ್ಲಿ ಶ್ರೀದೇವಿ ಹಾಗೂ ಇತರ ದೇವರಿಗೆ ನಿತ್ಯ ಸಾಮಾನ್ಯ ಪೂಜೆ ಯೊಂದಿಗೆ ನಿರಂತರ ಸಾಯಂಕಾಲ 5 ಗಂಟೆಯಿಂದ 7 ಗಂಟೆಯವರೆಗೆ ಭಜನಾ ಸಂಕೀರ್ತನೆಯನ್ನು ಪೊಳಲಿ ರಾಜರಾಜೇಶ್ವರೀ ಭಜನಾಮಂಡಳಿಯ ನೇತೃತ್ವದಲ್ಲಿ ನಾನಾ ಭಾಗದಿಂದ ಆಗಮಿಸಿ ಭಜನಾ ತಂಡಗಳು ಸಂಕೀರ್ತನೆಯಲ್ಲಿ ಪಾಲ್ಗೊಳ್ಳುತ್ತಾರೆ.
ದೇವಳದ ಆಡಳಿತ ಮೊಕ್ತೇಸರ ಅಮ್ಮುಂಜೆ ಡಾ ಮಂಜಯ್ಯ ಶೆಟ್ಟಿ,ಮೊಕ್ತೇಸರ ಹಾಗೂ ಜೀಣೋದ್ಧಾರ ಕಮಿಟಿಯ ಕಾರ್ಯದರ್ಶಿ ಉಳಿಪಾಡಿ ಗುತ್ತು ತಾರನಾಥ ಆಳ್ವ, ಚೇರಾ ಸೂರ್ಯನಾರಾಯಣ ರಾವ್,ದೇವಳದ ಪವಿತ್ರಪಾಣಿ ಮಾಧವ ಭಟ್ ಪೊಳಲಿ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಚಿವ ರಾಮಾನಾಥ ರೈ, ಉಪಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್, ದೇವಳದ ಕಾರ್ಯನಿರ್ವಹಣಾಕಾರಿ ಪ್ರವೀಣ್, ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಮೊದಲಾದ ಗಣ್ಯರ ಮೇಲುಸ್ತುವಾರಿಯಲ್ಲಿ, ಸಮಯೋಚಿತ ವಿಯುಕ್ತ ಪೂಜಾ ಕಾರ್ಯಗಳೊಂದಿಗೆ ಕೋಟ್ಯಂತರ ರೂ ವೆಚ್ಚದಲ್ಲಿ ಜೀರ್ಣೋದ್ಧಾರ ಕೈಂಕರ್ಯ ಸಾಂಗವಾಗಿ ಮುಂದುವರಿದಿದೆ.

By suddi9

Leave a Reply

Your email address will not be published. Required fields are marked *