ವಿಟ್ಲ:ದ. ಜಿ ಪಂ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ, ಕರ್ನಾಟಕ ಸರ್ಕಾರ ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ಇವರ ವಿದ್ಯಾರ್ಥಿಗಳಲ್ಲಿ `ವೈಜ್ಞಾನಿಕ ಮನೋಭಾವನೆ’ ಹದಿನೈದನೇ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭವು ನಡೆಯಿತು. ವಿಠಲ ವಿದ್ಯಾ ಸಂಘದ ಉಪಾಧ್ಯಕ್ಷ ಕ ಶಿ ವಿಶ್ವನಾಥ ಶಿಖರೋಪನ್ಯಾಸ ಮಾಡಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತಾಡುತ್ತಾ `ಶಿಬಿರದಲ್ಲಿ ಕಲಿತ ನಿಯಮಗಳನ್ನು ನಿಮ್ಮ ಮುಂದಿನ ಜೀವನದಲ್ಲಿ ಒಂದು ಚೌಕಟ್ಟಾಗಿ ಬಳಸಿ’ ಎಂದರು. ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವಿಟ್ಲ ಮಾದರಿ ಶಾಲೆಯ ಗೌರವಾಧ್ಯಕ್ಷ ಸುಬ್ರಾಯ ಪೈ, ಮುಖ್ಯ ಶಿಕ್ಷಕ ವಿಶ್ವನಾಥ ಗೌಡ, ವಿಠಲ ವಿದ್ಯಾ ಸಂಘದ ಕಾರ್ಯದರ್ಶಿ ಯಶವಂತ ವಿಟ್ಲ ಮತ್ತು ಕೋಶಾಧಿಕಾರಿ ನಿತ್ಯಾನಂದ ನಾಯಕ್ ಭಾಗವಹಿಸಿದ್ದರು. ಉತ್ತಮ ಶಿಬಿರಾರ್ಥಿಗಳಿಗೆ ಸಹ ಶಿಬಿರಾಧಿಕಾರಿ ಸುಚೇತನ್ ಜೈನ್ ಬಹುಮಾನಗಳನ್ನು ನೀಡಿದರು. ದೀಕ್ಷಾ, ರಕ್ಷಿತ್, ಮಹಾಲಕ್ಷ್ಮಿ, ಕೀರ್ತನ್ ಮತ್ತು ಸುಕನ್ಯಾ ಶಿಬಿರದ ಅನುಭವಗಳನ್ನು ಹಂಚಿಕೊಂಡರು. ಎನ್ ಎಸ್ ಎಸ್ ಘಟಕದ ನಾಯಕಿ ಜಯಶ್ರೀ ಸ್ವಾಗತಿಸಿದರು. ಶಿಬಿರಾಧಿಕಾರಿ ಅಣ್ಣಪ್ಪ ಸಾಸ್ತಾನ ವಂದಿಸಿದರು. ಸ್ವಸ್ತಿಕ್ ಕಾರ್ಯಕ್ರಮ ನಿರೂಪಿಸಿದರು. ದೀಪ್ತಿ ಸಹಕರಿಸಿದರು.

