ಬೆಳ್ಳೂರು ಬಾಳಿಕೆ ಯಕ್ಷಗಾನ ಕಲಾ ಸಂಘ ರಜತ ಮಹೋತ್ಸವ ಸಮಾರಂಭ
ಸುದ್ದಿ9ಕೈಕಂಬ ;ಬೆಳ್ಳೂರು ಬಾಳಿಕೆ ಯಕ್ಷಗಾನ ಕಲಾ ಸಂಘದ ರಜತ ಮಹೋತ್ಸವ ಸಮಾರಂಭ ಭಾನುವಾರ ಬೆಳ್ಳೂರಿನ ಬಾಳಿಕೆ ಎಂಬಲ್ಲಿ ನಡೆಯಿತು. ಬಿ.ಸಿರೋಡು ರಾಣಿ ಅಬ್ಬಕ್ಕ ತುಳು ಅಧ್ಯಾಯನ ಕೇಂದ್ರದ ಪ್ರೊ. ತುಕಾರಾಮ ಪೂಜಾರಿ ಮಾತನಾಡಿ ರಾಣಿ ಅಬ್ಬಕ ತುಳು ಅಧ್ಯಯನ ಕೇಂದ್ರಕ್ಕೆ ವಿದೇಶಿ ಮಹಿಳೆಯೋಬ್ಬಳು ಇತ್ತೀಚೇಗೆ ತುಳುನಾಡಿನ ವಸ್ತುಗಳ ಬಗ್ಗೆ ಅಭ್ಯಸಿಸಲು ಬಂದಿದ್ದಳು. ಆದರೆ ನಮ್ಮ ಪರಿಸ್ಥಿತಿ ದೂರದ ಬೆಟ್ಟ ನುಣ್ಣಗೆ ಎನ್ನುವಂತಾಗಿದೆ.ನಮ್ಮ ಸಂಸ್ಕೃತಿ, ಪರಂಪರೆ ಯನ್ನು ನಾವು ಮರೆಯುತ್ತಿದ್ದೇವೆ.ಪ್ರಾಚೀನ ದೇವಾಲಯಗಳ ಮೌಲ್ಯಗಳನ್ನು ಉಳಿಸಿಕೊಳ್ಳುವುದು ನಮ್ಮ ಮುಂದಿರುವ ಸವಾಲು ಎಂದರು. ಮಾಜಿ ಸಚಿವ ಬಿ.ನಾಗರಾಜ ಸೆಟ್ಟಿ ಮಾತನಾಡಿ ಯಕ್ಷಗಾನ ನಶಿಸದ ಕಲೆ.ಅದರಲ್ಲೂ ದೇವಿಮಹಾತ್ಮೆ ಪ್ರಸಂಗವನ್ನು ನೋಡಿದಷ್ಟು ಬಾರಿ ಸಾಕಾಗುವುದಿಲ್ಲ. ಆಪ್ರಸಂಗ ಹಳತು ಅನ್ನಿಸೋದಿಲ್ಲ. ಅಂತಹ ಶಕ್ತಿ ದೇವಿ ಮಹಾತ್ಮೆ ಪ್ರಸಂಗಕ್ಕಿದೆ.ಅದುಯಕ್ಷಗಾನದ ಶಕ್ತಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೆಂಕಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರ ರಘು ಎಲ್ ಶೆಟ್ಟಿ ವಹಿಸಿದ್ದರು.ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ್ ನಾಕ್,ಕಟೀಲು ಮೇಳದ ಸಂಚಾಲಕ ದೇವಿಪ್ರಸಾದ್ಶೆಟ್ಟಿ,ಹಿಂದು ಧಮರ್ೊತ್ಥಾನ ವೇದಿಕೆ ರಾಯಿ ಕೊಲ ಅಧ್ಯಕ್ಷ ದುಗರ್ಾದಾಸ್ ಶೆಟ್ಟಿಮಾವಂತೂರು ,ಬೆಗಳೂರು ಮಂಗಳಾ ಆಟ್ಸರ್್ಪ್ರಿಂಟರ್ಸ್ನ ಸುಂದರಸಾಲಿಯಾನ್ ಯಕ್ಷಗಾನ ಕಲಾ ಸಂಘದ ಗೌರವವಾದ್ಯಕ್ಷ ಕೆ.ಪ್ರಸನ್ನ ಕುಮಾರ್ ಶೆಟ್ಟಿ ಏಚೀಲ್, ಸಂಜೀವ ಶೆಟ್ಟಿ ಏಚೀಲ್ ಮತ್ತಿತರರು ಉಪಸ್ಥಿತರಿದ್ದರು. ಯಕ್ಷ ಕಲಾ ಸಂಘ ಬೆಳೆದು ಬಂದ ಹಾದಿಯ ಕುರಿತು ಪ್ರಧಾನ ಕಾರ್ಯಧಶರ್ಿ ದೇವಪ್ಪ ಪೂಜಾರಿ ಪ್ರಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಭಾಗವತರಾದ ಸತೀಶ್ಶೆಟ್ಟಿ ಪಟ್ಲ, ಹಿರಿಯ ಯಕ್ಷಗಾನ ಕಲಾವಿದ ಜಯರಾಮ ಶೆಟ್ಟಿ ಮುಂಡ್ಕೂರು ,ತ್ರೋಬಾಲ್ ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಶಿಲ್ಪ , ಎತ್ತರ ಜಿಗಿತ ರಾಜ್ಯ ಮಟ್ಟದ ಕ್ರೀಡಾಪಟು ಧೀರಾಜ್ ಅವರನ್ನು ಸನ್ಮಾನಿಸಲಾಯಿತು.ರಜತ ಮಹೋತ್ಸವದ ಆಚರಣಾ ಸಮಿತಿ ವತಿಯಿಂದ ಇಪತ್ಯೆದು ವರ್ಷ ಕಾರ್ಯಧಶರ್ಿಯಾಗಿ ಸೇವೆ ಸಲ್ಲಿಸಿದ ದೇವಪ್ಪ ಪೂಜಾರಿ ಹಾಗೂ ,ಕವಿತ ಎಸ್ ಶೆಟ್ಟಿ ಅಧ್ಯಕ್ಷ ಚಂದ್ರಶೇಖರ್ ರಾವು ಅವರನ್ನು ಅಭಿನಂದಿಸಲಾಯಿತು. ರಜತ ಮಹೋತ್ಸವ ಆಚಾರಣಾ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ನಾಶಿಕ್ ಮುಂಬೈ ಸ್ವಾಗತಿಸಿದರು. ವೇದಾನಂದ ಕಾರಂತ ವಂದಿಸಿ ಚೇತನ್ ಪಿಲಿಕುಳ ನಿರೂಪಿಸಿದರು._DSC2933

_DSC3119

_DSC3132

_DSC3266

4 vp rajat mhosthav sambrama

kp 5

 

 

By suddi9

Leave a Reply

Your email address will not be published. Required fields are marked *